ಮುಂಬೈ:- ಕಳ್ಳನೋರ್ವ ದೇವಸ್ಥಾನಕ್ಕೆ ನುಗ್ಗಿ ದೇವರ ಬೆಳ್ಳಿ ಕಿರೀಟಕ್ಕೆ ಕೈ ಹಾಕಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ಮುಂಬೈನ ಬೋರಿವಲಿಯ ದತ್ತಪ್ಡಾ ಪ್ರದೇಶದ ವಿಠ್ಠಲ ದೇವಸ್ಥಾನದಲ್ಲಿ ಈ ಕಳ್ಳತನದ ಘಟನೆ ನಡೆದಿದ್ದು, ದೇವಸ್ಥಾನದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.
ದೇವಸ್ಥಾನದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಭಕ್ತನಾಗಿ ದೇವಾಲಯಕ್ಕೆ ಪ್ರವೇಶಿಸಿ ದೇವರ ತಲೆಯಲ್ಲಿರುವ ಬೆಳ್ಳಿಯ ಕಿರೀಟಕ್ಕೆ ಕನ್ನ ಹಾಕಿದ್ದಾನೆ. ಕದ್ದು ಓಡಿಹೋಗುವ ಮೊದಲು ಅದನ್ನು ಚೀಲದಲ್ಲಿ ಇರಿಸಿ, ದೇವರ ವಿಗ್ರಹಕ್ಕೆ ಕೈಮುಗಿದು ಪ್ರಾರ್ಥಿಸುತ್ತಾ ಕ್ಷಮೆಯಾಚಿಸುವುದು ಕಂಡು ಬಂದಿದೆ
ಜುಲೈ 17ರ ಬುಧವಾರ ಬೆಳಗ್ಗೆ 10:07ರ ಸುಮಾರಿಗೆ ವ್ಯಕ್ತಿ ದೇವಾಲಯವನ್ನು ಪ್ರವೇಶಿಸುವುದನ್ನು ಕಾಣಬಹುದು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಶಂಕಿತನನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ