ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಹಸುವೊಂದು ಕಳ್ಳತನ ಆಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚೆನ್ನಾಲಿಂಗನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಚೆನ್ನಾಲಿಂಗನಹಳ್ಳಿ ಗ್ರಾಮದ ಮರಿಸ್ವಾಮಿ ಎಂಬುವವರ ಹಸು ಕಳ್ಳತನವಾಗಿದೆ. ಗ್ರಾಮದಲ್ಲಿ ಕೊಟ್ಟಿಗೆ ನಿರ್ಮಿಸಿ ಎಂಟು ಹಸುಗಳಲ್ಲಿ ರೈತ ಸಾಕಿದ್ದ.
ಕಳೆದ ಹಲವು ವರ್ಷಗಳಿಂದಲೂ ಕೂಡ ಹೈನುಗಾರಿಕೆಯಲ್ಲಿ ರೈತ ಮರಿಸ್ವಾಮಿ ತೊಡಗಿದ್ದ. ಆದರೆ ಕಳೆದರಾತ್ರಿ ಯಾರೊ ಕಿಡಿಗೇಡಿಗಳು ಕೊಟ್ಟಿಗೆಗೆ ನುಗ್ಗಿ ಹಸು ಕಳ್ಳತನವೆಸಗಿದ್ದಾರೆ. ಸುಮಾರು 40ಸಾವಿರ ಮೌಲ್ಯದ ಹಸುವೊಂದನ್ನು ಕಳುವು ಮಾಡಿ ಪರಾರಿಯಾಗಿದ್ದಾರೆ