ಪ್ರತಿ ಕುಟುಂಬದಲ್ಲೂ ಒಬ್ಬರಲ್ಲ ಒಬ್ಬರು ಬಿಪಿ ಅಥವಾ ಮಧುಮೇಹಕ್ಕೆ ತುತ್ತಾಗಿದ್ದಾರೆ. ಇಂಥಹ ಆರೋಗ್ಯ ಸಮಸ್ಯೆಗಳಿಗೆ ಆಹಾರ ಪದ್ಧತಿಯೇ ದೀರ್ಘಕಾಲದ ಪರಿಹಾರವಾಗಿದೆ. ಆ ಹಿನ್ನೆಲೆಯಲ್ಲಿ ಹೆಸರು ಕಾಳು ಎಷ್ಟು ಪ್ರಯೋಜನಕಾರಿ
ಹೆಸರು ಕಾಳಿನಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆಯಂತೆ.
ಇನ್ನೂ ಯಾವ್ಯಾವ ಕಾಯಿಲೆಗಳಿಗೆ ಹೆಸರು ಕಾಳು ಬೆಸ್ಟ್. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವು ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಕಾರಣವಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಶೇಖರಣೆಯಾಗುವ ಮೂಲಕ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹೆಸರು ಕಾಳು ತಿನ್ನುವುದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ ಎಂದು ಸಂಶೋಧನೆ ಸೂಚಿಸುತ್ತದೆ.
ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇದು ಗಂಭೀರ ಸಮಸ್ಯೆಯಾಗಿದೆ. ಆದರೆ ಹೆಸರು ಕಾಳು ತಿನ್ನುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೆಸರು ಕಾಳಿನಲ್ಲಿ ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಇದೆ. ಇದು ರಕ್ತದಲ್ಲಿನ ಸಕ್ಕರೆಯ ಬಿಡುಗಡೆಯನ್ನು ನಿಧಾನಗೊಳಿಸುತ್ತದೆ. ಮೊಳಕೆ ಹೊಡೆದ ಹೆಸರು ಕಾಳು ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಹಾಗಾಗಿ ವೃದ್ಧರಿಗೆ ಮೆದುವಾಗಿ ಬೇಯಿಸಿದ ಹೆಸರು ಕಾಳು ತುಂಬಾನೇ ಒಳ್ಳೆಯದು.
ವೇಗವಾಗಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡವು ಸಾಮಾನ್ಯ ಸಮಸ್ಯೆಯಾಗಿದೆ ಹೆಸರು ಕಾಳಿನಲ್ಲಿರುವ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೈಬರ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳಗ್ಗೆ ಹೊತ್ತು ಮೊಳಕೆಯೊಡೆದ ಕಾಳನ್ನು ತಿನ್ನಬೇಕು. ಇದರಲ್ಲಿ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿ ಕಂಡುಬರುತ್ತವೆ. ಹಾಗಾಗಿ ಇದನ್ನು ತಿನ್ನುವುದರಿಂದ ನೇತಾಡುವ ಹೊಟ್ಟೆಯಿಂದ ಮುಕ್ತಿ ಪಡೆಯಬಹುದು. ನೀವು
ತಿನ್ನುವುದರಿಂದ ನೇತಾಡುವ ಹೊಟ್ಟೆಯಿಂದ ಮುಕ್ತಿ ಪಡೆಯಬಹುದು. ನೀವು ಮೊಳಕೆಯೊಡೆದ ಹೆಸರು ಕಾಳನ್ನು ಸಂಜೆ ಹೊತ್ತು ಸ್ನ್ಯಾಕ್ಸ್ ಆಗಿ ಕೂಡ ತಿನ್ನಬಹುದು.
ಬೇಸಿಗೆ ಕಾಲದಲ್ಲಿ ಹೀಟ್ ಸ್ಟ್ರೋಕ್ ಒಂದು ಪ್ರಮುಖ ಸಮಸ್ಯೆಯಾಗಿದೆ. ಕೆಲವೊಮ್ಮೆ ಈ ಪರಿಸ್ಥಿತಿಯು ತುಂಬಾ ಗಂಭೀರವಾಗಬಹುದು. ಬೇಸಿಗೆಯಲ್ಲಿ ಹೆಸರು ಕಾಳನ್ನು ಹೆಚ್ಚಾಗಿ ತಿಂದರೆ ಶಾಖದ ಹೊಡೆತದ ಅಪಾಯವನ್ನು ಕಡಿಮೆ ಮಾಡಬಹುದು. ಇನ್ನು ಹೆಸರು ಬೇಳೆ ದೇಹದ ಉಷ್ಣಾಂಶವನ್ನು ತಗ್ಗಿಸುವ ಕೆಲಸ ಮಾಡುತ್ತದೆ