ಭಕ್ತಾಧಿಗಳ ಇಷ್ಟರ್ಥಾವನ್ನು ಈಡೇರಿಸುವ ಶಕ್ತಿ ದೇವತೆ ಓಂ ಶ್ರೀ ರುದ್ರ ಭದ್ರಕಾಳಿ ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಗೆ ಸಹ್ರಸಾರು ಮಂದಿ ಭಾಗವಹಿಸುವ ಮೂಲಕ ಭಕ್ತಿ ಪರಕಾಷ್ಟೆಯಲ್ಲಿ ಭಕ್ತರು ಮಿಂದೆದ್ದರು. ಎಲ್ಲಿ ಅಂತೀರಾ ಹಾಗಾದರೆ ಈ ಸ್ಟೋರಿ ನೋಡಿ.
ಚಿನ್ನದನಾಡು ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಐವಾರಹಳ್ಳಿ, ಮಜರಾ ಗಂಗಾಪುರ ಗ್ರಾಮದಲ್ಲಿ ನೆಲೆಸಿರುವ ಶಕ್ತಿ ದೇವತೆಗೆ ನಡೆಯುವ ವಿಶೇಷ ಪೂಜೆಗೆ ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಾದ ಆಂಧ್ರ, ತಮಿಳುನಾಡಿನಿಂದ ಭಕ್ತಾಧಿಗಳು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ವಿಶೇಷವಾಗಿ
ದೇವಾಲಯದ ಆವರಣದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ೧೦೮ ಅಡಿಗಳ ಬೇತಾಳಾ ವಿಗ್ರಹವನ್ನು ಸಹ ಪ್ರತಿಷ್ಠಾಪಿಸಲಾಗಿದೆ, ಕಳೆದ ಎರಡು ವರ್ಷಗಳ ಹಿಂದೆ ನಿರ್ಮಾಣವಾದ ದೇವಾಲಯವು ಹಲವು ವಿಶಿಷ್ಟ ಹಾಗೂ ವಿಸ್ಮಯಗಳಿಗೆ ಹೆಸರುವಾಸಿಯಾಗಿದೆ ಪ್ರತಿ ಶುಕ್ರವಾರದಂದು ನಡೆಯುವ ವಿಶೇಷ ಪೂಜೆ, ಅಭಿಷೇಕದಲ್ಲಿ ಭಕ್ತದಾಧಿಗಳು ಭಾಗಿಯಾಗಿ ತಮ್ಮಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ದೇವಾಲಯಕ್ಕೆ ಆಗಮಿಸುವವರಿಗೆ ಕೆಲವೇ ದಿನಗಳಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ನೀಡುತ್ತಾಳೆ ರುದ್ರ ಭದ್ರಕಾಳಿ ದೇವಿ, ತಿಂಗಳಿಗೊಮ್ಮೆ ಬರುವ ಅಮಾವಸ್ಯೆಗೆ ವಿಶಿಷ್ಟವಾದ ರೀತಿಯಲ್ಲಿ ಪೂಜೆಗಳು ಈ ದೇವಸ್ಥಾನದಲ್ಲಿ ನಡೆಯುವುದರಿಂದ ಕರ್ನಾಟಕ ಸೇರಿದಂತೆ ಆಂದ್ರ ತಮಿಳುನಾಡು ರಾಜ್ಯಗಳಿಂದ ಭಕ್ತಧಿಗಳು ಆಗಮಿಸಿ ದೇವಿಯ ವಿಶೇಷ ಪೂಜೆಯಲ್ಲಿ
ವಿಶೇಷವಾಗಿ ಅಮಾವಸ್ಯೆಗೆ ದೇವಸ್ಥಾನಕ್ಕೆ ಆಗಮಿಸುವ ಭಕ್ತಾಧೀಗಳಿಗೆ ಮಾಂಸದೂಟ ನೀಡುವುದು ಮತ್ತೊಂದು ವಿಶೇಷ.
ದೇವಾಲಯವನ್ನು ಆಘೋರಿ ಚಂದ್ರನಾಥ್ ಅಘೋರಿ ತವಮಣಿ ನಿರ್ಮಾಣ ಮಾಡಿದ್ದು ಕಳೆದ ೧೨ ವರ್ಷಗಳ ಕಾಲ ಭದ್ರಕಾಳಿಯ ಆರಾಧಕರಾಗಿದ್ದು, ದೈವೀಶಕ್ತಿ ಹಾಗೂ ಅಮೋಘ ಅನುಭವವನ್ನು ಪಡೆದುಕೊಂಡಿದ್ದು ವನ ಗಿಡ ಮೂಲಿಕೆಗಳಿಂದ ಔಷಧೀಗಳನ್ನು ತಯಾರಿಸುವ ಅನುಭವವನ್ನು ಸಹ ಹೊಂದಿದ್ದು, ಕುಡಿತಕ್ಕೆ ದ್ಯಾಸರಾಗಿರುವವರಿಗೆ ಇಲ್ಲಿ ಸಿಗಲಿದೆ ಶಾಶ್ವತ ಪರಿಹಾರ ಈಗಾಗಲೇ ದೇವಿ ಶಕ್ತಿಯು ಪವಾಡ ಸಾಭೀತಾಗಿದ್ದು ಭಕ್ತಿಯನ್ನು ದೇವಿಯಲ್ಲಿ ಬೇಡಿಕೊಂಡರೆ ಎಲ್ಲಾ ಸಮಸ್ಯೆಗಳನ್ನು ಈಡೇರಿಸುತ್ತಾರೆ ಎನ್ನುವ ನಂಬಿಕೆ ದೇವಾಲಯಕ್ಕೆ ಬರುವ ಭಕ್ತಾಧಿಗಳದ್ದು,
ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳು ಯಾವುದೇ ಸಮಸ್ಯೆಯಿದ್ದರೂ ಪರಿಹಾರವನ್ನು ಕಲ್ಪಿಸುತ್ತಾಳೆ ಶ್ರೀ ಭದ್ರಕಾಳಿ, ೧೦೮ ಅಡಿಗಳ ಬೇತಾಳ್, ಶ್ರೀ ಕಾಳಭೈರವ, ಶ್ರೀ ಕಾಟೇರಮ್ಮ ದೇವಿಯ ಶಕ್ತಿಪೀಠ.
ದೇವಾಲಯಕ್ಕೆ ಈಗಾಗಲೇ ಹಲವಾರು ರೀತಿಯ ಸಮಸ್ಯೆಗಳನ್ನು ಹೊತ್ತು ಬಂದಿರುವ ಭಕ್ತಾಧಿಗಳಿಗೆ ಯಾವುದೇ ರೀತಿಯ ಶುಲ್ಕವಿಲ್ಲದೆ ಎರಡು ಮೂರು ವಾರದಲ್ಲೇ ಸಮಸ್ಯೆಗಳು ಪರಿಹಾರವನ್ನು ದೇವಾಲಯದಲ್ಲಿ ಕಾಣಬಹುದಾಗಿದೆ. ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ೧೦೮ ಅಡಿಗಳಬೇತಾಳ್ ವಿಗ್ರಹವನ್ನು ಸಹ ನಾವು ಇಲ್ಲಿ ಕಾಣಬಹುದಾಗಿದ್ದು ಒಮ್ಮೆಯಾದ್ರೂ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿನ ದೈವಿ ಅನುಭವವನ್ನು ಅನುಭವಿಸಲು ಭಕ್ತಾದಿಗಳು ಆಗಮಿಸಲಿ ಎನ್ನುವುದು ದೇವಾಲಯದ ಅರ್ಚಕರ ಮನವಿಯಾಗಿದೆ