ವಾಹನ ಸಂಚಾರರೇ ರಸ್ತೆಯಲ್ಲಿ ಹೋಗೋ ಮುನ್ನ ಹುಷಾರಾಗಿರಿ. ಇಲ್ಲದಿದ್ರೆ ಪ್ರಾಣಕ್ಕೆ ಕುತ್ತು ಬರಬಹುದು. ಏನಿದು ಸ್ಟೋರಿ ಅಂತಿರಾ!?,, ಈ ಸುದ್ದಿ ಪೂರ್ತಿ ಓದಿ.
ಇದು ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಬಿಎಂಟಿಸಿ ಬಸ್ ಸ್ಟ್ಯಾಂಡ್ ರೋಡ್ನ ಕಥೆ.
ಈ ರೋಡ್ ನಲ್ಲಿ ಪ್ರತಿದಿನ ಸಾವಿರಾರು ಬಸ್ಸುಗಳು ಸಂಚಾರ ಮಾಡುತ್ತವೆ. ಲಕ್ಷಾಂತರ ಜನರು ಓಡಾಡುತ್ತಾರೆ. ಆದರೆ ಈ ರೋಡ್ ಗೆ ಎಂಟ್ರಿಯಾಗ್ತಿದ್ದಂತೆ ವೆಲ್ಕಮ್ ಮಾಡೋದೆ ಗುಂಡಿಗಳು. ಈ ರೋಡ್ನಲ್ಲಿ ಐದೋ ಹತ್ತೋ ಗುಂಡಿಗಳಿಲ್ಲ ಸುಮಾರು ಐವತ್ತಕ್ಕೂ ಹೆಚ್ಚು ಗುಂಡಿಗಳಿವೆ ಸಣ್ಣಪುಟ್ಟ ಗುಂಡಿಗಳಿಲ್ಲ ದೊಡ್ಡ ದೊಡ್ಡ ಗುಂಡಿಗಳು. ಈ ಗುಂಡಿಗಳಿಂದ ಮೆಜೆಸ್ಟಿಕ್ ಎಂಟ್ರಿ ಆಗ್ತಿದಂತೆ ಬಸ್ ನಲ್ಲಿರುವ ಪ್ರಯಾಣಿಕರು ನಿಂತು ಕೊಳ್ಳುತ್ತಾರೆ ಅಥವಾ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ ಕೈಕಾಲು, ಸೊಂಟ ಮುರಿದು ಹೋಗದೆ ಇರಲಿ ಎಂದು ಅಷ್ಟರಮಟ್ಟಿಗೆ ಇಲ್ಲಿಯವರೆಗೆ ಗುಂಡಿಗಳು ಆಳವಾಗಿವೆ.
ಇನ್ನೂ ಇತ್ತ ಬನ್ನೇರುಘಟ್ಟ ರೋಡ್, ಆನೆಪಾಳ್ಯ ಜಂಕ್ಷನ್ ಬಳಿ ಬಿದ್ದಿರುವ ಗುಂಡಿಗಳಲ್ಲಿ ವಾಹನಗಲೇನಾದ್ರು ಇಳಿದ್ರೆ ಮುಗಿತು ಮತ್ತೆ ಮೇಲೆ ಬರಲು ಹರಸಾಹಸ ಪಡಬೇಕು. ವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಆ ಕಡೆಯಿಂದ ಈ ಕಡೆ ಟರ್ನ್ ಮಾಡ್ತಾರೆ. ಇದರಿಂದ ಹಿಂದೆ ಬರುವ ವಾಹನಗಳಿಗೂ ಸಮಸ್ಯೆಯಾಗುತ್ತಿದೆ. ಈ ಗುಂಡಿಗಳಿಂದ ಈ ರೋಡ್ ಟ್ರಾಫಿಕ್ ಕೂಡ ಆಗುತ್ತಿದೆ. ಇತ್ತ ಹೊಸಕೆರೆಹಳ್ಳಿ ಕೋಡಿ ರೋಡ್
ನಲ್ಲಂತೋ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಈ ರೋಡ್ನಲ್ಲಿ ಓಡಾಡಲು ಆಗೋದೆ ಇಲ್ಲ ಗುಂಡಿಗಳಲ್ಲಿ ಅಷ್ಟು ಕೊಚ್ಚೆ ನೀರು ನಿಂತಿದೆ. ಪ್ರತಿದಿನ ಸ್ಕೂಲ್ ಕಾಲೇಜಿಗೆ ಹೋಗುವ ಮಕ್ಕಳು ಕಷ್ಟ ಪಟ್ಟು ನಡೆಯುತ್ತಾರೆ.
ಒಟ್ನಲ್ಲಿ ನಗರದಲ್ಲಿ ಸುರಿಯುತ್ತಿರು ಮಳೆಯಿಂದ ಗುಂಡಿಗಳಲ್ಲಿ ನೀರು ನಿಂತಿರುತ್ತೆ. ಹಾಗಾಗಿ ವಾಹನ ಸವಾರರಿಗೆ ಗುಂಡಿಗಳು ಯಾವುದು ರೋಡ್ ಯಾವುದು ಅಂತ ಗೊತ್ತಾಗದೆ ಪರದಾಡುವಂತಾಗಿದೆ.