ಬೆಂಗಳೂರು : ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ವಿ. ದೋಂಡಾಲೆ ಸಾವಿಗೆ ಶರಣಾಗಿದ್ದು, ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಓರ್ವ ಗಂಡುಮಗುವನ್ನು ಅವರು ಅಗಲಿದ್ದಾರೆ ಎನ್ನಲಾಗಿದೆ.
ಇನ್ನೂ ಆತ್ಮಹತ್ಯೆಗೆ ಕಾರಣಗಳು ತಿಳಿದುಬಂದಿರದ ಹಿನ್ನೆಲೆ . ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ಒಳಪಡಿಸಲಾಗಿದೆ.
ಇನ್ನೂ ಇವರು ಹಲವಾರು ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿರುವ ವಿನೋದ್ ವಿ. ದೋಂಡಾಲೆ ಪಿ.ಶೇಷಾದ್ರಿ, ಟಿ.ಎನ್, ಸೀತಾರಾಂ ಅವರ ಗರಡಿಯಲ್ಲಿ ಬೆಳೆದ ಪ್ರತಿಭಾವಂತ ನಿರ್ದೇಶಕ ಎಂದು ಹೇಳಲಾಗಿದೆ.
ನಿನ್ನೆಯಷ್ಟೇ ನಟ ನೀನಾಸಂ ಸತೀಶ್ ಸತೀಶ್ ಹಾಗೂ ನಿರ್ಮಾಪಕರ ಜೊತೆ ಶೂಟಿಂಗ್ ಬಗ್ಗೆ ಚರ್ಚಿಸಿದ್ದ ವಿನೋದ್ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿತ್ತು.