ಈ ಭಾರಿಯ ಬಿಗ್ ಬಾಸ್ ಶೋ ವಿವಾದಗಳ ಮೂಲಕವೇ ಹೆಚ್ಚು ಹೆಚ್ಚು ಸುದ್ದಿ ಆಗುತ್ತದೆ. ಸದ್ಯ ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್ ಒಟಿಟಿ 3 ಸೀಸನ್ ನಲ್ಲಿ ಅರ್ಮಾನ್ ಮಲಿಕ್ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಯೂಟ್ಯೂಬರ್ ಅರ್ಮಾನ್ ಮಲ್ಲಿಕ್ ಗೆ ಇಬ್ಬರು ಪತ್ನಿಯರು. ಪತಿ ಅರ್ಮಾನ್ ಗೆ ಪಾಯಲ್ ಹಾಗೂ ಕೃತಿಕಾ ಇಬ್ಬರು ಬಿಗ್ ಬಾಸ್ ಮನೆಗೆ ತೆರಳಿದ್ದರು. ಇತ್ತೀಚೆಗೆ ಪಾಯಲ್ ದೊಡ್ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈಗ ಅವರು ಅರ್ಮಾನ್ಗೆ ವಿಚ್ಛೇದನ ಕೊಡೋ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಪಾಯಲ್ ಈ ಬಗ್ಗೆ ವ್ಲಾಗ್ನಲ್ಲಿ ಮಾಹಿತಿ ನೀಡಿದ್ದಾರೆ. ‘ಈ ನಾಟಕ ಹಾಗೂ ದ್ವೇಷಗಳಿಂದ ನಾನು ಬೇಸತ್ತಿದ್ದೇನೆ. ನನಗೇನೋ ತೊಂದರೆ ಇಲ್ಲ, ಆದರೆ ಅದು ನನ್ನ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಇದು ನಿಜಕ್ಕೂ ಆಘಾತಕಾರಿ ಹಾಗೂ ಹೊಲಸು ರೀತಿಯದ್ದು ಈ ಕಾರಣಕ್ಕೆ ಅರ್ಮಾನ್ ಅವರಿಂದ ದೂರ ಆಗಲು ಬಯಸುತ್ತಿದ್ದೇನೆ. ಅವರು ಕೃತಿಕಾ ಜೊತೆ ಇರಬಹುದು. ನನ್ನ ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ’ ಎಂದಿದ್ದಾರೆ.
‘ನಾನು ನನ್ನ ಮೂರು ಮಕ್ಕಳ ಜೊತೆ ಎಲ್ಲಾದರೂ ಹೋಗುತ್ತೇನೆ. ನಾನು ಹೆಚ್ಚು ದ್ವೇಷವನ್ನು ಎದುರಿಸಿಲ್ಲ. ನನ್ನ ನಿರ್ಧಾರದಿಂದ ಹಿಂದೆ ಬರುವ ಮಾತಿಲ್ಲ. ನನ್ನ ಮಕ್ಕಳು ಇದಕ್ಕೆ ಗುರಿಯಾಗೋದು ಬೇಡ. ಯಾವ ಪಾಲಕರೂ ಇದನ್ನು ಸಹಿಸೋದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಅರ್ಮಾನ್ ಮಲಿಕ್ 2011ರಲ್ಲಿ ಪಾಯಲ್ ನ ಮದುವೆ ಆದರು. ಆ ಬಳಿಕ ಅರ್ಮಾನ್ ಅವರು 2018ರಲ್ಲಿ ಪಾಯಲ್ ಗೆಳತಿ ಕೃತಿಕಾ ಅವರನ್ನು ಕೂಡ ಮದುವೆ ಆದರು. ಪಾಯಲ್ಗೆ ಮೂವರು ಮಕ್ಕಳು ಹಾಗೂ ಕೃತಿಗೆ ಒಂದು ಮಗು ಇದೆ. ಸದ್ಯ ಪಾಯಲ್ ನೀಡಿರುವ ಹೇಳಿಕೆ ಚರ್ಚೆ ಹುಟ್ಟುಹಾಕಿದೆ. ಇದರ ಜೊತೆಗೆ ಜಿಯೋ ಸಿನಿಮಾ ಬಹುಪತ್ನಿತ್ವವನ್ನು ಪ್ರಚೋದಿಸುತ್ತಿರುವ ಆರೋಪ ಕೂಡ ಕೇಳಿ ಬಂದಿದೆ.