ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಕೂದಲೆಳೆ ಅಂತರದಲ್ಲಿ ಚಿಕ್ಕಣ್ಣ ಬಚಾವ್ ಆಗಿದ್ದಾರೆ. ಚಿಕ್ಕಣ್ಣನಿಗೂ, ಕೊಲೆ ಕೇಸ್ ಗೂ ಏನು ಸಂಬಂಧ ಅಂತೀರಾ!?.. ಈ ಡೀಟೈಲ್ಸ್ ನೋಡಿ.
ಕೊಲೆ ನಡೆಯುವ ಮುಂಚೆ ನಟ ದರ್ಶನ್ ಹಾಗೂ ಇನ್ನೂ ಕೆಲವರು, ಪ್ರಕರಣದ ಮತ್ತೊಬ್ಬ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಕುಡಿದು ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಸಹ ಇದ್ದರು. ನಟ ದರ್ಶನ್ ಪಟ್ಟಣಗೆರೆ ಶೆಡ್ಗೆ ಹೋಗುವಾಗ ಚಿಕ್ಕಣ್ಣರನ್ನು ಸಹ ಕರೆದರಂತೆ. ಆದರೆ ಚಿಕ್ಕಣ್ಣ ದರ್ಶನ್ ಜೊತೆ ಹೋಗಲು ಒಪ್ಪದೆ ತಡವಾಗಿದೆ ಮನೆಗೆ ಹೋಗುವೆ ಎಂದು ಹೇಳಿ ಮನೆಯ ಕಡೆ ಹೊರಟಿದ್ದಾರೆ.
ಆದರೆ ಅದೇ ಪಾರ್ಟಿಯಲ್ಲಿದ್ದ ಪ್ರದೋಶ್, ಬೇಡವೆಂದರೂ ನಾನೂ ಬರ್ತೀನಿ ಬಾಸ್ ಎಂದುಕೊಂಡು ದರ್ಶನ್ ಜೊತೆಗೆ ಹೋಗಿದ್ದರಂತೆ. ಅಸಲಿಗೆ ಪ್ರದೋಶ್, ದರ್ಶನ್ ಗ್ಯಾಂಗ್ನಲ್ಲಿಯೇ ಇರಲಿಲ್ಲವಂತೆ. ಪಾರ್ಟಿ ನಡೆಯುವಾಗ ನನಗೆ ತುಸು ಕೆಲಸ ಇದೆ ಎಂದು ದರ್ಶನ್ ಪಾರ್ಟಿಯಿಂದ ಹೊರಬಂದರಂತೆ. ಆಗ ಪ್ರದೋಶ್ ಸಹ ಬಾಸ್ ನಾನೂ ಬರ್ತೀನಿ ಎಂದುಕೊಂಡು ಅವರ ಜೊತೆ ಹೋದರಂತೆ. ದರ್ಶನ್ ಬೇಡ ಎಂದರೂ ಸಹ ದರ್ಶನ್ ಜೊತೆಗೆ ಕಾರಿನಲ್ಲಿ ಹೋಗಿದ್ದಾರೆ. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದಿರುವ ವಿಚಾರ ಪಾರ್ಟಿಯಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲವಂತೆ. ಆದರೆ ಪ್ರದೋಶ್ ಪಾರ್ಟಿ ಬಳಿಕ ದರ್ಶನ್ ಅನ್ನು ಬಲವಂತ ಮಾಡಿ ಅವರ ಜೊತೆಗೆ ಪಟ್ಟಣಗೆರೆ ಶೆಡ್ಗೆ ಹೋಗಿದ್ದಾನೆ. ಇದರಿಂದಾಗಿ ಆತ ಪ್ರಕರಣದ ಆರೋಪಿಯಾಗಿದ್ದಾನೆ. ಕೊಲೆ ನಡೆದ ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಪ್ರದೋಶ್ ಅನ್ನು ದರ್ಶನ್ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.