ಯೆಮೆನ್ನ ಬಂದರನ್ನು ಗುರಿಯಾಗಿಸಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, 87 ಮಂದಿ ಗಾಯಗೊಂಡಿದ್ದಾರೆ.
ಟೆಲ್ ಅವೀವ್ ಮೇಲೆ ಇರಾನ್ ಬೆಂಬಲಿತ ಗುಂಪು ಡ್ರೋನ್ ದಾಳಿ ನಡೆಸಿದ ಒಂದು ದಿನ ಬಳಿಕ ಇಸ್ರೇಲಿ ಫೈಟರ್ ಜೆಟ್ಗಳು ಯೆಮನ್ನ ಹೊಡೆಡಾ ಬಂದರಿನ ಬಳಿ ದಾಳಿ ನಡೆಸಿದೆ.
ದಾಳಿಯಿಂದಾಗಿ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬಂದರಿನಲ್ಲಿ ತೈಲ ಟ್ಯಾಂಕ್ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ರಕ್ಷಣಾ ಪಡೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಯೆಮೆನ್ ಸುದ್ದಿವಾಹಿನಿ ವರದಿ ಮಾಡಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಯೆಮೆನ್ ಸುಪ್ರೀಂ ಪೊಲಿಟಿಕಲ್ ಕೌನ್ಸಿಲ್, ಶತ್ರುಗಳ ಮೇಲೆ ಪ್ರತಿದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂದಿದೆ.