ಕೆಲವೊಮ್ಮೆ ಕೆಲವರಿಗೆ ಕೆಲ ಸೆಕೆಂಡ್ಗಳಲ್ಲೇ ಬದುಕೇ ಬದಲಾಗಿ ಬಿಡುತ್ತೆ.. ಇಂತಹ ಗಳಿಗೆಗಳಲ್ಲಿ ಕೆಲವರಿಗೆ ಒಳ್ಳೆದಾದ್ರೆ ಇನ್ನು ಕೆಲವರಿಗೆ ಜೀವ್ನನೇ ಮುಗಿದು ಹೋಗಿ ಬಿಡುತ್ತೆ. ಕೇಣೂಕಾಸ್ವಾಮಿ ಕೊಲೆ ಕೇಸ್ ನಲ್ಲಿ ಫಿಟ್ ಆಗಿರೋ ಪ್ರದೂಷ್ ಹಾಗು ನಟ ಚಿಕ್ಕಣ್ಣ ಇದಕ್ಕೆ ತಾಜಾ ತಾಜಾ ಉದಾಹರಣೆ.
ಹಾಗಾದ್ರೆ ಪ್ರದೋಷ್ ಕೊಲೆ ಕೇಸ್ ನಲ್ಲಿಹೇಗೆ ತಗಲಾಕಿಕೊಂಡ್ರು ನಟ ಚಿಕ್ಕಣ್ಣ ಇದರಿಂದ ಹೇಗೆ ಬಚಾವಾದ್ರು ಅನ್ನೋದನ್ನ ತೋರಿಸ್ತೀವಿ ನೋಡಿ.
ಒಂದೋಂದು ಸಾರಿ ನಾವು ತೆಗೆದುಕೊಳ್ಳೋ ನಿರ್ಧಾರಗಳು ನಮ್ಮ ಕಾಪಾಡತ್ತೆ ಅದೇ ನಿರ್ಧಾರಗಳು ತಪ್ಪಾದ್ರೆ ಜೀವ್ನಾನೇ ಮುಗಿದು ಹೋಗುತ್ತೆ..ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಸಹಚರ ಪ್ರದೂಷ್ ಕಥೆ ಇದೇ ಆಗಿರೋದು…ಈ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಸೇರಿ 17 ಆರೋಪಿಗಳು ಜೈಲು ಸೇರಿದ್ದಾರೆ.. ಆದ್ರೆ ನಟ ಚಿಕ್ಕಣ್ಣ ಈ ಪ್ರಕರಣದಲ್ಲಿ ಕೊದಲೆಳೆ ಅಂತರದಿಂದ ಪಾರಾಗಿದ್ದಾರೆ. ಅಸಲಿಗೆ ಚಿಕ್ಕಣ್ಣ ಸಹ ಆರೋಪಿಗಳಲ್ಲಿ ಒಬ್ಬರಾಗಿ ಜೈಲಿನಲ್ಲಿರಬೇಕಿತ್ತು, ಆದರೆ ಅವರ ಅದೃಷ್ಟ ಚೆನ್ನಾಗಿದ್ದು ಕೂದಲೆಳೆ ಅಂತರದಲ್ಲಿ ಈ ಪ್ರಕರಣದಿಂದ ಪಾರಾದರು. ಆದರೆ ಪ್ರದೋಷ್ ಅದೃಷ್ಟ ಕೊನೆಯ ಕ್ಷಣದಲ್ಲಿ ಕೈಕೊಟ್ಟು ಆರೋಪಿಯಾಗಿದ್ದಾನೆ.
ರೇಣುಕಾ ಸ್ವಾಮಿ ಕೊಲೆ ನಡೆಯುವ ಮುಂಚೆ ನಟ ದರ್ಶನ್ ಹಾಗೂ ಇನ್ನೂ ಕೆಲವರು, ಪ್ರಕರಣದ ಮತ್ತೊಬ್ಬ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ಕುಡಿದು ಪಾರ್ಟಿ ಮಾಡಿದ್ರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಸಹ ಇದ್ರು. ಈ ವೇಳೆ ಪಟ್ಟಣಗೆರೆ ಶೆಡ್ ನಿಂದ ರೇಣುಕಾಸ್ವಾಮಿಯನ್ನು ಎತ್ತಾಕಿಕೊಂಡು ಬಂದಿದ್ದೀವಿ ಅನ್ನೋ ಫೋನ್ ಬಂದಿದೆ. ತಕ್ಷಣ ಪಾರ್ಟಿಯಿಂದ ಎದ್ದ ದರ್ಶನ್ ಪಟ್ಟಣಗೆರೆ ಶೆಡ್ಗೆ ರೆಡಿಯಾಗಿದ್ದಾರೆ. ಈ ವೇಳೆ ಪಾರ್ಟಿಯಲ್ಲಿದ್ದ ಚಿಕ್ಕಣ್ಣರನ್ನು ಶೆಡ್ ಗೆ ಹೋಗೋಣ ಬಾ ಎಂದು ಕರೆದಿದ್ದರಂತೆ. ಆದರೆ ಚಿಕ್ಕಣ್ಣ ದರ್ಶನ್ ಜೊತೆ ಹೋಗಲು ಒಪ್ಪದೆ ತಡವಾಗಿದೆ ಮನೆಗೆ ಹೋಗ್ತೀನಿ ಎಂದು ಹೇಳಿ ಮನೆಯ ಕಡೆ ಹೊರಟು ಬಿಟ್ಟಿದ್ದಾರೆ. ಮರುದಿನ ವಿಷಯ ಗೊತ್ತಾಗಿ ಯಪ್ಪಾ ಬದುಕಿಕೊಂಡೆ ಎಂದು ನಿಟ್ಟುಸಿರು ಬಿಟ್ಟಿದ್ರಂತೆ..
ಆದರೆ ಅದೇ ಪಾರ್ಟಿಯಲ್ಲಿದ್ದ ಪ್ರದೋಶ್ನನ್ನು ಬ್ಯಾಡ ಬ್ಯಾಡ ಅಂದ್ರು ಕೇಳದೆ ನಾನೂ ಬರ್ತೀನಿ ಬಾಸ್ ಎಂದು ದರ್ಶನ್ ಜೊತೆಗೆ ಹೋಗಿದ್ದರಂತೆ. ಅಸಲಿಗೆ ಪ್ರದೋಶ್, ದರ್ಶನ್ ಗ್ಯಾಂಗ್ನಲ್ಲಿಯೇ ಇರಲಿಲ್ಲವಂತೆ. ಪಾರ್ಟಿ ನಡೆಯುವಾಗ ನನಗೆ ತುಸು ಕೆಲಸ ಇದೆ ಎಂದು ದರ್ಶನ್ ಪಾರ್ಟಿಯಿಂದ ಹೊರಬಂದರಂತೆ. ಆಗ ಪ್ರದೋಶ್ ಸಹ ಬಾಸ್ ನಾನೂ ಬರ್ತೀನಿ ಎಂದುಕೊಂಡು ಅವರ ಜೊತೆ ಹೋದರಂತೆ. ದರ್ಶನ್ ಬೇಡ ಎಂದರೂ ಸಹ ದರ್ಶನ್ ಜೊತೆಗೆ ಕಾರಿನಲ್ಲಿ ಹೋಗಿದ್ದಾರೆ. ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತಂದಿರುವ ವಿಚಾರ ಪಾರ್ಟಿಯಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲವಂತೆ. ಆದರೆ ಪ್ರದೋಶ್ ಪಾರ್ಟಿ ಬಳಿಕ ದರ್ಶನ್ ಅನ್ನು ಬಲವಂತ ಮಾಡಿ ಅವರ ಜೊತೆಗೆ ಪಟ್ಟಣಗೆರೆ ಶೆಡ್ಗೆ ಹೋಗಿದ್ದಾನೆ. ಆ ನಂತರ ಪಟ್ಟಣಗೆರೆ ಶೆಡ್ನಲ್ಲಿ ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಕೊಲೆ ನಡೆದ ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಪ್ರದೋಶ್ ಅನ್ನು ದರ್ಶನ್ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ಕೊಟ್ಟ ಹಣವನ್ನು ಪ್ರದೋಶ್, ಇತರರಿಗೆ ಹಂಚಿಕೆ ಮಾಡಿ ಇದೀಗ ಕಂಬಿಎಣಿಸುತ್ತಿದ್ದಾನೆ.
ಒಟ್ಟಿನಲ್ಲಿ ನಟ ಚಿಕ್ಕಣ್ಣನ ಅದೃಷ್ಟ ಚನ್ನಾಗಿದ್ದಿದ್ದರಿಂದ ಜೆಟ್ಲಾಗ್ ಮತ್ತು ರೇಣುಕಾಸ್ವಾಮಿ ಕೊಲೆ ಕೇಸ್ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.ಇನ್ನು ಬಾಸ್ ಬಾಸ್ ಅಂತ ಹಿಂದೆ ಹೋದವರು ಈಗ ನರಕ ಅನುಭವಿಸುತ್ತಿದ್ದಾರೆ.