ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರಗಳನ್ನು ಸೇವಿಸುದು ಅಸ್ವಸ್ಥತೆ, ಅಜೀರ್ಣ ಅಥವಾ ಇತರ ಅನಾರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟು ಮಾಡಬಹುದು. ಸದ್ಯ ನಾವಿಂದು ಖಾಲಿ ಹೊಟ್ಟೆಯಲ್ಲಿ ನೀವು ಸೇವಿಸಬಾರದ ಕೆಲವು ಆಹಾರಗಳು ಮತ್ತು ಅವುಗಳನ್ನು ಏಕೆ ತಿನ್ನಬಾರದು ಎಂಬುವುದರ ಬಗ್ಗೆ ತಿಳಿಸುತ್ತೇವೆ.
ಸಿಟ್ರಸ್ ಹಣ್ಣುಗಳು:
ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು. ಇದು ಕರುಳಿನಲ್ಲಿ ಆಮ್ಲ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಉರಿಯೂತ ಮತ್ತು ಗ್ಯಾಸ್ಟ್ರಿಕ್ ಅಲ್ಸರ್ಗೆ ಕಾರಣವಾಗುತ್ತದೆ. ಇದನ್ನೇ ಅಲ್ಸರ್ ಎಂದು ಕರೆಯುತ್ತೇವೆ. ಅಲ್ಲದೆ, ಅಂತಹ ಹಣ್ಣುಗಳಲ್ಲಿ ಫೈಬರ್ ಮತ್ತು ಫ್ರಕ್ಟೋಸ್ ಅಧಿಕವಾಗಿದ್ದು, ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಕಾಫಿ:
ಬೆಳಿಗ್ಗೆ ಎದ್ದ ತಕ್ಷಣ ಮೊದಲು ಬಯಸುವುದು ಚಹಾ ಮತ್ತು ಕಾಫಿ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಅಪಾಯ ಎದುರಾಗಬಹುದು. ಕಾಫಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ. ಇದು ಕಾಮಾಲೆಗೆ ಕಾರಣವಾಗಬಹುದು. ಅಲ್ಲದೆ, ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಎದೆಯುರಿ ಮುಂತಾದ ಸಮಸ್ಯೆಗಳು ಉಂಟಾಗಬಹುದು.
ಮಸಾಲೆಯುಕ್ತ ಆಹಾರಗಳು: ಮಸಾಲೆಯುಕ್ತ ಆಹಾರಗಳು ಹೊಟ್ಟೆಯ ಒಳಪದರವನ್ನು ಕೆರಳಿಸಬಹುದು ಮತ್ತು ನಮಗೆ ನಾನಾ ಸಮಸ್ಯೆಗಳನ್ನು ಉಂಟು ಮಾಡಬಹುದು. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಮಸಾಲೆಯುಕ್ತ ಆಹಾರ ತಿಂದರೆ ಹೊಟ್ಟೆಯ ಸಮಸ್ಯೆ ಉಂಟಾಗುತ್ತದೆ. ಇವುಗಳು ಆಸಿಡ್ ರಿಫ್ಲಕ್ಸ್, ಅಜೀರ್ಣ ಅಥವಾ ಕೆಟ್ಟ ಸಂದರ್ಭಗಳಲ್ಲಿ ಜಠರದುರಿತ ಅಥವಾ ಜಠರ ಹುಣ್ಣಿಗೆ ಕಾರಣವಾಗಬಹುದು.
ಮೊಸರು:
ಮೊಸರಿನಂತಹ ಹುದುಗಿಸಿದ ಹಾಲಿನ ಉತ್ಪನ್ನಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ, ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವು ಹೊಟ್ಟೆಯಲ್ಲಿ ಹೆಚ್ಚು ಆಮ್ಲೀಯತೆಯನ್ನು ಉಂಟುಮಾಡುತ್ತದೆ. ಹೆಚ್ಚಿನ ಆಮ್ಲ ಮಟ್ಟದಿಂದಾಗಿ, ಹೈಡ್ರೋಕ್ಲೋರಿಕ್ ಆಮ್ಲವು ಹೊಟ್ಟೆಯಲ್ಲಿ ಉತ್ಪತ್ತಿಯಾಗುತ್ತದೆ, ಇದು ಕೆಟ್ಟ ಉಸಿರಾಟ, ಹೊಟ್ಟೆ ನೋವು ಮತ್ತು ಇತರ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.