ಆಲೂಗಡ್ಡೆಯನ್ನು ಸರಿಯಾದ ಕ್ರಮದಲ್ಲಿ ಅಡುಗೆ ಮಾಡುವಿದರಿಂದ ಹಿತಮಿತವಾಗಿ ತಿಂದುಂಡು ಆರೋಗ್ಯದಿಂದಿರಬಹುದು. ತೂಕವನ್ನೂ ಇಳಿಸಬಹುದು. ಹೌದು. ನಿಮಗೆ ಆಶ್ಚರ್ಯವೆನಿಸಿದರೂ ಸತ್ಯ. ಆಲೂಗಡ್ಡೆಯನ್ನು ತಿನ್ನುವ ಮೂಲಕ ತೂಕವನ್ನು ಇಳಿಸಬಹುದು. ಯಾಕೆಂದರೆ ಇದರಲ್ಲಿ ಅನೇಕ ಪೋಷಕ ತತ್ವಗಳಿವೆ.
ಆರೋಗ್ಯಕರ ಆಹಾರ ಪದ್ಧತಿಯನ್ನು ಹೊಂದುವ ಜನರಿಗೆ ತಮ್ಮ ದೇಹದ ತೂಕವನ್ನು ನಿಯಂತ್ರಣ ಮಾಡಲು ಸಾಧಾರಣ ಆಲೂಗಡ್ಡೆ ಅಥವಾ ಸಿಹಿ ಆಲೂಗಡ್ಡೆ ಎರಡು ಸಹ ಸಹಾಯ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಪೌಷ್ಟಿ ಕಾಂಶದ ಪ್ರಮಾಣ ಸಾಕಷ್ಟು ಕಂಡುಬರುತ್ತದೆ. ತೂಕ ನಿಯಂ ತ್ರಣದಲ್ಲಿ ಆಲೂಗಡ್ಡೆ ಪಾತ್ರ…
ಮನುಷ್ಯನಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ತೂಕ ಹೆಚ್ಚಾ ಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಬಿಳಿ ಆಲೂಗಡ್ಡೆ ಮತ್ತು ಸಿಹಿ ಆಲೂಗಡ್ಡೆ ಎರಡು ಸಹ ತಮ್ಮಲ್ಲಿ ವಿಟಮಿನ್ ಸಿ ಅಂಶ ವನ್ನು ಹೆಚ್ಚಾಗಿ ಒಳಗೊಂಡಿವೆ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇವುಗಳ ಪಾತ್ರ ದೊಡ್ಡದು.
ನಾರಿನಂಶ
ಆಲೂಗಡ್ಡೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶವಿದೆ. ನಾರಿನಂಶ ಉತ್ತಮ ಜೀರ್ಣಕ್ರಿಯೆಗೆ ಬೇಕೇಬೇಕು. ಅಷ್ಟೇ ಅಲ್ಲ, ನಾರಿನಂಶ ಸಮೃದ್ಧವಾಗಿದ್ದರೆ ಬಹಳ ಹೊತ್ತಿನವರೆಗೆ ಹೊಟ್ಟೆ ಫುಲ್ ಇದ್ದ ಅನುಭವವಾಗುತ್ತದೆ. ಹೀಗಾಗಿ ಆಗಾಗ ಮತ್ತೆ ತಿನ್ನಬೇಕೆನಿಸುವುದಿಲ್ಲ. ಒಂದು ಸಾಮಾನ್ಯ ಗಾತ್ರದ ಆಲೂಗಡ್ಡೆಯಲ್ಲಿ ಅಂದರೆ ನೂರು ಗ್ರಾಂ ಆಲೂಗಡ್ಡೆಯಲ್ಲಿ ೮೦ ಕ್ಯಾಲರಿಯಿದೆ.
ಪೋಷಕಾಂಶಗಳು
ವಿಟಮಿನ್ ಸಿ ಯೂ ಸೇರಿದಂತೆ ಪೊಟಾಶಿಯಂ, ವಿಟಮಿನ್ ಬಿ6 ಇತ್ಯಾದಿಗಳೆಲ್ಲ ಇರುವ ಆಲೂಗಡ್ಡೆಯಲ್ಲಿಯೂ ಸಾಕಷ್ಟು ಪೋಷಕಾಂಶಗಳಿವೆ. ಇದರಲ್ಲಿರುವ ವಿಟಮಿನ್ ಸಿ ದೇಹದ ಬೆಳವಣಿಗೆ, ರೋಗನಿರೋಧಕತೆಗೆ, ಅಂಗಾಂಶಗಳ ಮರುರಚನೆಗೆ ಸಹಾಯ ಮಾಡಿದರೆ, ಪೊಟಾಶಿಯಂ ಮಾಂಸಖಂಡಗಳ ಹಿಗ್ಗು ಕುಗ್ಗುವಿಕೆಗೆ, ದೇಹದಲ್ಲಿರುವ ನೀರಿನಂಶವನ್ನು ಹಾಗೆಯೇ ಸಮತೋಲನದಲ್ಲಿ ಕಾಪಾಡಲು, ವಿಟಮಿನ್ ಬಿ೬ ಮಿದುಳಿನ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿವೆ.
ಆರೋಗ್ಯಕರ ಕಾರ್ಬೋಹೈಡ್ರೇಟ್ಗಳು
ಶಕ್ತಿಯ ಉತ್ಪಾದನೆಗೆ ಕಾರ್ಬೋಹೈಡ್ರೇಟ್ ಬೇಕೇ ಬೇಕು. ಆಲೂಗಡ್ಡೆಯಲ್ಲಿ ಇಂತಹ ಕಾರ್ಬೋಹೈಡ್ರೇಟ್ ಇದ್ದು ಇದು ಬಹಳ ಹೊತ್ತಿಗೆ ನಮಗೆ ಬೇಕಾದ ಶಕ್ತಿ, ಚೈತನ್ಯ ನೀಡುತ್ತದೆ.