ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇಂದು ತನ್ನ ಜೀವನದ ರಿಯಲ್ ಹೀರೋಯಿನ್ ಪರಿಚಯಿಸುವುದಾಗಿ ಸುಧೀರ್ ಹೇಳಿಕೊಂಡಿದ್ದರು. ಅಂತೆಯೇ ಇದೀಗ ಪ್ರೀತಿ ಹುಟ್ಟಿದ ಜಾಗದಲ್ಲೇ ಪ್ರೀ ವೆಡ್ಡಿಂಗ್ ವಿಡಿಯೋ ಶೂಟ್ ಮಾಡಿಸಿದ್ದಾರೆ ಈ ಜೋಡಿ.
ತರುಣ್ ಹಾಗೂ ಸೋನಲ್ ಪ್ರೀತಿ ಆರಂಭ ಆಗಿದ್ದು ಸಿನಿಮಾ ಸೆಟ್ನಲ್ಲಿ. ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಸಿನಿಮಾದಲ್ಲಿ ಸೋನಲ್ ನಟಿಸಿದ್ದರು. ಸಿನಿಮಾ ಮಾಡುವಾಗಲೇ ಇಬ್ಬರ ಮಧ್ಯೆ ಪ್ರೀತಿ ಮೂಡಿತು. ಈಗ ತರುಣ್ ಹಾಗೂ ಸೋನಲ್ ಥಿಯೇಟರ್ನಲ್ಲೇ ಪ್ರೀ-ವೆಡ್ಡಿಂಗ್ ವಿಡಿಯೋ ಮಾಡಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಗಮನ ಸೆಳೆಯುತ್ತಿದೆ. ಆಗಸ್ಟ್ 10-11ರಂದು ಇವರ ವಿವಾಹ ನೆರವೇರಲಿದೆ.
ನವರಂಗ್ ಥಿಯೇಟರ್ನಲ್ಲಿ ಈ ವಿಡಿಯೋ ಶೂಟ್ ಮಾಡಿದ್ದು, ಸಿನಿಮಾ ಸೀನ್ ರೀತಿಯೇ ತರುಣ್ ಮತ್ತು ಸೋನಲ್ ವಿಡಿಯೋ ಮೂಡಿ ಬಂದಿದೆ. ಸಿನಿಮಾಟೋಗ್ರಾಫರ್ ಎ.ಜೆ ಶೆಟ್ಟಿ ಈ ವಿಡಿಯೋ ಶೂಟ್ ಮಾಡಿದ್ದಾರೆ. ಆಗಸ್ಟ್ 10, 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಫ್ಯಾಲೆಸ್ನಲ್ಲಿ ವಿವಾಹ ಜರುಗಲಿದೆ.
ಇನ್ನು ಪ್ರಿ ವೆಡ್ಡಿಂಗ್ ಶೂಟ್ನಲ್ಲಿ ತರುಣ್ ಮತ್ತು ಸೋನಲ್ ಬ್ಲ್ಯಾಕ್ ಬಣ್ಣದ ಔಟ್ ಫಿಟ್ನಲ್ಲಿ ಕಾಣಿಸಿಕೊಂಡಿದ್ದು, ತರುಣ್ಗೆ ಡಿಸೈನರ್ ಚೇತನ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಸೋನಲ್ಗೆ ರಶ್ಮಿ ಎಂಬುವವರು ಡಿಸೈನ್ ಮಾಡಿದ್ದಾರೆ. ಸದ್ಯ ತರುಣ್ ಮದುವೆ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ.