ಬೆಂಗಳೂರು: ರೌಡಿಗಳ ಬಿಲ್ಡಪ್ ರೀಲ್ಸ್ ಗಳಿಗೆ ಬೆಂಳೂರಿನ ಪೊಲೀಸರು ಬೆಸತ್ತಿದ್ದಾರೆ. ರೀಲ್ಸ್ ಮಾಡಿ ಅಪ್ ಲೋಡ್ ಮಾಡ್ತಿದ್ದವರಿಗೆ ಸಿಸಿಬಿ ಶಾಕ್ ನೀಡಿದೆ. ಇನ್ಸ್ ಸ್ಟಾ ಗ್ರಾಮ್ ನಲ್ಲಿ ರೀಲ್ಸ್ಅಪ್ ಲೋಡ್ ಮಾಡ್ತಿದ್ದ ರೌಡಿಶೀಟರ್ಸ್ ಗಳಿಗೆ ಸಿಸಿಬಿಯ OCW ವಿಭಾಗದ ಅಧಿಕಾರಿಗಳಿಂದ ಕ್ರಮ ಕೈಗೊಳ್ಳಲಾಗಿದೆ.
ಸಿಸಿಬಿ ಜಂಟಿ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಸೂಚನೆ ಮೇರೆಗೆ ಸುಮಾರು 60 ಇನ್ಸ್ ಸ್ಟಾ ಹಾಗೂ ಯೂಟ್ಯೂಬ್ ಅಕೌಂಟ್ ಗಳನ್ನ ಸಿಸಿಬಿ ತಂಡ ಪತ್ತೆ ಮಾಡಿದೆ.
ಪತ್ತೆ ಮಾಡಿ ಪೇಜ್ ಗಳ ಅಡ್ಮಿನ್ ಗಳನ್ನು ಸಿಸಿಬಿಗೆ ಕರೆಸಿದ್ದು, ಸಿಸಿಬಿಗೆ ಕರೆಸಿ ವಿಚಾರಣೆ ನಡೆಸಿದಾಗ ರೋಚಕ ಸಂಗತಿ ಬೆಳಕಿಗೆ ಬಂದಿದೆ . ಪೇಜ್ ಅಡ್ಮಿನ್ ಗಳು ಬಹುಪಾಲು ಅಪ್ರಾಪ್ತ ಬಾಲಕರು ಎಂದು ತಿಳಿದು ಬಂದಿದೆ
ಪೇಜ್ ಅಡ್ಮಿನ್ ಗಳಿಗೆ ರೌಡಿಗಳ ಸಹಚರರಿಂದ ಸಂಪರ್ಕ ದಿಂದ ರೌಡಿಗಳ ಶಿಷ್ಯಂದಿರು ಆನ್ ಲೈನ್ ಮೂಲಕವೇ ಸಂಪರ್ಕ ಮಾಡ್ತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ವಿಲ್ಸನ್ ಗಾರ್ಡನ್ ನಾಗ, ಮಾರತ್ ಹಳ್ಳಿ ರೋಹಿತ್, ಸೈಲೆಂಟ್ ಸುನೀಲ, ಕುಣಿಗಲ್ ಗಿರಿ ಸೇರಿ ಹಲವಾರು ರೌಡಿಗಳ ಶಿಷ್ಯಂದಿರು ಇದ್ದರು. ವಿಡಿಯೋಗಳನ್ನ ನೀಡಿ ಎಡಿಟ್ ಮಾಡಿ ಪೇಜ್ ನಲ್ಲಿ ಅಪ್ಲೋಡ್ ಮಾಡುವಂತೆ ಸೂಚನೆ ನೀಡಲಾಯಿತು.
ಒಂದು ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಲು 500 ರೂ. ನೀಡ್ತಿದ್ದರು . ಸಿಸಿಬಿ ಅವರು ಸದ್ಯ ಅಪ್ರಾಪ್ತ ಬಾಲಕರ ಪೋಷಕರಿಗೆ ಕರೆಸಿ ವಾರ್ನಿಂಗ್ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ಮುಂದುವರೆಸಿರೋ ಸಿಸಿಬಿ ಪೊಲೀಸ್ ರು ಮುಂದುವರೆಸಿದ್ದಾರೆ.