ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಿಜ ಜೀವನದ ಹಿರೋಯಿನ್ ಪರಿಚಯಿಸುತ್ತೇನೆ ಎಂದಿದ್ದ ತರುಣ್ ಸುಧೀರ್ ಮದ್ದಾದ ವಿಡಿಯೋ ಮೂಲಕ ಮನ ಮೆಚ್ಚಿನ ಹುಡುಗಿಯನ್ನು ಪರಿಚಯಿಸಿದ್ದಾರೆ.
ತರುಣ್ ಸುಧೀರ್ ಮತ್ತು ಸೋನಾಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ವಿಚಾರವನ್ನ ಬ್ಯೂಟಿಫುಲ್ ಆಗಿರೋ ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ತರುಣ್ ಮತ್ತು ಸೋನಾಲ್ ಇಬ್ಬರು ಸಿನಿಮಾ ಇಂಡಸ್ಟ್ರೀಯವರೇ ಆಗಿರೋದ್ರಿಂದ ತಮ್ಮ ಪ್ರೀವೆಡ್ಡಿಂಗ್ ವಿಡಿಯೋವನ್ನ ಥಿಯೇಟರ್ ನಲ್ಲಿಯೇ ಶೂಟ್ ಮಾಡಿರೋದು ವಿಶೇಷವಾಗಿದೆ.
ಬೆಂಗಳೂರಿನ ನವರಂಗ್ ಥಿಯೇಟರ್ ನಲ್ಲಿ ಈ ವಿಡಿಯೋ ಶೂಟ್ ಮಾಡಲಾಗಿದ್ದು ಸಿನಿಮಾ ಸೀನ್ ರೀತಿಯೇ ತರುಣ್ ಮತ್ತು ಸೋನಾಲ್ ವಿಡಿಯೋ ಮೂಡಿ ಬಂದಿದೆ. ಸಿನಿಮಾಟೋಗ್ರಾಫರ್ ಎ ಜೆ ಶೆಟ್ಟಿ ಈ ವಿಡಿಯೋ ಶೂಟ್ ಮಾಡಿದ್ದು, ಆಗಸ್ಟ್ 10, 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರೋ ಪೂರ್ಣಿಮಾ ಫ್ಯಾಲೆಸ್ ನಲ್ಲಿ ವಿವಾಹ ನಡೆಯಲಿದೆ.
ಸಾಮಾನ್ಯವಾಗಿ ಪ್ರೀವೆಡ್ಡಿಂಗ್ ಎಂದರೆ ಜನರು ಸಿನಿಮಾ ಸ್ಟೈಲ್ ನಲ್ಲಿ ಇರಬೇಕು ಅಂತ ಸಿನಿಮ್ಯಾಟಿಕ್ ಆಗಿ ಶೂಟ್ ಮಾಡ್ತಾರೆ. ಆದರೆ ತರುಣ್ ಮತ್ತು ಸೋನಾಲ್ ಇಬ್ಬರೂ ಸಿನಿಮಾದವ್ರೇ ಆಗಿರೋದ್ರಿಂದ ಬೇರೆಯದ್ದೇ ಸ್ಟೈಲ್ ನಲ್ಲಿ ಇರಲಿ ಅಂತ ಥಿಯೇಟರ್ ನಲ್ಲಿ ಶೂಟ್ ಮಾಡಿದ್ದಾರೆ.
ನಿರ್ದೇಶಕ ತರುಣ್ ಚಿಕ್ಕ ವಯಸ್ಸಿನಿಂದಲೂ ನವರಂಗ್ ಥಿಯೇಟರ್ ನಲ್ಲಿ ಸಿನಿಮಾಗಳನ್ನ ನೋಡಿಕೊಂಡು ಬಂದವರು. ಈಗ ತಮ್ಮ ನಿರ್ದೇಶನದ ಸಿನಿಮಾಗಳು ನವರಂಗ್ ಥಿಯೇಟರ್ ನಲ್ಲಿ ಶತದಿನೋತ್ಸವ ಪೂರೈಸಿವೆ. ಹಾಗಾಗಿ ನವರಂಗ್ ಥಿಯೇಟರ್ ನಲ್ಲೇ ತಮ್ಮ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ.
ಇನ್ನು ಪ್ರೀವೆಡ್ಡಿಂಗ್ ಶೂಟ್ ನಲ್ಲಿ ತರುಣ್ ಮತ್ತು ಸೋನಾಲ್ ಬ್ಲಾಕ್ ಅಂಡ್ ಬ್ಲಾಕ್ ಔಟ್ ಫಿಟ್ ನಲ್ಲಿ ಕಾಣಿಸಿಕೊಂಡಿದ್ದು ತರುಣ್ ಅವ್ರಿಗೆ ಡಿಸೈನರ್ ಚೇತನ್ ಕಾಸ್ಟ್ಯೂಮ್ಸ್ ಡಿಸೈನ್ ಮಾಡಿದ್ದು ಸೋನಾಲ್ ಅವ್ರಿಗೆ ರಶ್ಮಿ ಅವ್ರು ಡಿಸೈನ್ ಮಾಡಿದ್ದಾರೆ. ಸದ್ಯ ತರುಣ್ ಮತ್ತು ಸೋನಾಲ್ ಮದುವೆ ಸಂಭ್ರಮ ಜೋರಾಗಿದ್ದು ಇಷ್ಟು ದಿನ ಹೀರೋಯಿನ್ ಮತ್ತು ಡೈರೆಕ್ಟರ್ ಆಗಿದ್ದ ಸೋನಾಲ್ ಮತ್ತು ತರುಣ್ ಇನ್ನು ಕೆಲವೇ ದಿನಗಳಲ್ಲಿ ಸತಿ-ಪತಿಗಳಾಗಲಿದ್ದಾರೆ.
ಸೋನಲ್ ನನ್ನ ಜೀವನದ ಹೀರೋಯಿನ್ ಅನ್ನೋದನ್ನ ಸ್ವತಃ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. ಈ ಮೂಲಕ ತಾವು ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋ ವಿಚಾರವನ್ನೂ ಅಧಿಕೃತವಾಗಿ ಘೋಷಿಸಿದ್ದಾರೆ.