ಜರ್ಮನಿಯಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿದ ಆಫ್ಘನ್ನರು ಕಚೇರಿಯನ್ನು ಧ್ವಂಸಗೊಳಿಸಿದ್ದು ಪಾಕಿಸ್ತಾನದ ಧ್ವಜವನ್ನು ಕಿತ್ತೆಸೆದಿದ್ದಾರೆ. ಸದ್ಯ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿ ಪಾಕಿಸ್ತಾನಿ ದೂತಾವಾಸದಲ್ಲಿ ಮೊದಲಿಗೆ ಭದ್ರತಾ ಸಿಬ್ಬಂದಿಯೊಂದಿಗೆ ಅಫ್ಘಾನಿಗರು ಘರ್ಷಣೆ ನಡೆಸಿರುವುದು ವೀಡಿಯೊದಲ್ಲಿ ಕಾಣಬಹುದಾಗಿದೆ. ಈ ಸಮಯದಲ್ಲಿ ಅವರು ಧ್ವಜಸ್ಥಂಭದ ಮೇಲಕ್ಕೆ ಹತ್ತಿ ಪಾಕಿಸ್ತಾನಿ ಧ್ವಜವನ್ನು ಕಿತ್ತು ಬಿಸಾಡಿದ್ದಾರೆ. ಈ ವೇಳೆ ಹಲವರನ್ನು ಜರ್ಮನ್ ಪೊಲೀಸರು ಬಂಧಿಸಿದ್ದು, ಘಟನೆಯ ನಂತರ ಆಫ್ಘನ್ನರ ನಡೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಬಲವಾಗಿ ವಿರೋಧಿಸಲಾಗುತ್ತಿದೆ.
ಕೋಲಾಹಲದ ದೃಷ್ಟಿಯಿಂದ ಪಾಕಿಸ್ತಾನವು ಕರಾಚಿಯಲ್ಲಿ ಜರ್ಮನಿಯ ದೂತಾವಾಸದ ಸುರಕ್ಷತೆಯನ್ನು ಹೆಚ್ಚಿಸಿದ್ದು, ಭದ್ರತಾ ಕಾರಣಗಳಿಂದಾಗಿ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಕೆಲವು ಮಾಧ್ಯಮ ವರದಿಗಳು ಅಫ್ಘಾನ್ ನಿರಾಶ್ರಿತರನ್ನು ಪಾಕಿಸ್ತಾನದಿಂದ ಅಫ್ಘಾನಿಸ್ತಾನಕ್ಕೆ ಕಳುಹಿಸಿದ್ದರಿಂದ ಕೋಪಗೊಂಡು ಈ ರೀತಿಯ ಕತ್ಯ ನಡೆಸಿದ್ದಾರೆ ಎನ್ನಲಾಗುತ್ತಿದೆ.