ನನ್ನ ಮತ್ತು ವಿರಾಟ್ ಕೊಹ್ಲಿ ಸಂಬಂಧ ಬಗ್ಗೆ ಸಾಕಷ್ಟು ಬಾರಿ ಮಾತಾಡಿದ್ದೇನೆ. ನಮ್ಮಿಬ್ಬರ ಸಂಬಂಧ ಕೇವಲ ಟಿಆರ್ಪಿಗಾಗಿ ಅಲ್ಲ ಎಂದು ಟೀಂ ಇಂಡಿಯಾ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ನನ್ನ ಮತ್ತು ಕೊಹ್ಲಿ ಸಂಬಂಧ ವೈಯಕ್ತಿಕವಾದದ್ದು.
ಟಿಆರ್ಪಿಗಾಗಿ ಅಲ್ಲ. ಮೈದಾನದಲ್ಲಿ, ಪ್ರತಿಯೊಬ್ಬರು ತಮ್ಮ ಸ್ವಂತ ಜರ್ಸಿಗಾಗಿ ಹೋರಾಡಲು ಮತ್ತು ಗೆಲುವಿನೊಂದಿಗೆ ಡ್ರೆಸ್ಸಿಂಗ್ ಕೊಠಡಿಗೆ ಮರಳುವ ಹಕ್ಕನ್ನು ಪಡೆದಿದ್ದಾರೆ ಎಂದಿದ್ದಾ
ಗಂಭೀರ್ ಮತ್ತು ಕೊಹ್ಲಿ ಒಳ್ಳೆಯ ಸ್ನೇಹಿತರಾಗಿರಲಿಲ್ಲ. ಐಪಿಎಲ್ನಲ್ಲಿ ಇಬ್ಬರು ಮುಖಾಮುಖಿಯಾದಗ ಇದು ಬಹಿರಂಗವಾಗಿದೆ. ಹೀಗಿದ್ದರು ಸಹ ಜುಲೈ 27ರಿಂದ ಆರಂಭವಾಗುವ ಟಿ20 ಮತ್ತು ಏಕದಿನ ಕ್ರಿಕೆಟ್ಗಾಗಿ ಶ್ರೀಲಂಕಾಕ್ಕೆ ಒಟ್ಟಿಗೆ ಪ್ರವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಅದು ಸುಳ್ಳು. ನಾನು ಮತ್ತು ಕೊಹ್ಲಿ ಸಾಕಷ್ಟು ಚರ್ಚೆಗಳನ್ನು ನಡೆಸಿದ್ದೇವೆ. ಪ್ರತಿಯೊಬ್ಬರೂ ಅವರ ಆಟವನ್ನು ಆಡುತ್ತಾರೆ. ಈ ಸಮಯದಲ್ಲಿ, ಈ ಸಮಯದಲ್ಲಿ ನಾವು ಭಾರತದ 140 ಕೋಟಿ ಭಾರತೀಯರನ್ನ ಪ್ರತಿನಿಧಿಸುತ್ತಿದ್ದೇವೆ. ಭಾರತ ಹೆಮ್ಮೆಪಡುವ ಕೆಲಸ ಮಾಡುತ್ತೇವೆ ಎನ್ನುವ ವಿಶ್ವಾಸವಿದೆ ಎಂದು ಗಂಭೀರ್ ಅವರು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಹೆಚ್ಚಿನ ಪಂದ್ಯಗಳಿಗೆ ಲಭ್ಯವಿರುತ್ತಾರೆ. ಟಿ20 ಮತ್ತು ಏಕದಿನ ಕ್ರಿಕೆಟ್ ವಲ್ಡ್ಕಪ್ನಂತಹ ದೊಡ್ಡ ವೇದಿಕೆಯಲ್ಲಿ ಏನನ್ನು ನೀಡಬಲ್ಲವು ಎಂಬುದನ್ನು ತೋರಿಸಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಇಬ್ಬರು 2027ರ ವಿಶ್ವಕಪ್ ವರೆಗೆ ತಮ್ಮ ಫಿಟ್ನೆಸ್ ಉಳಿಸಿಕೊಳ್ಳಬಹುದು ಎಂದು ನಂಬಿದ್ದೇನೆ. ಈ ವಿಷಯ ತೀರ ಅವರ ವೈಯಕ್ತಿಕ ವಿಷಯವಾಗಿದೆ.