ಬೆಂಗಳೂರು : ವಿಧಾನಸಭೆಯಲ್ಲಿ ಮಾತಾನಾಡಿದ ಕಾಂಗ್ರೆಸ್ ಶಾಸಕ ಪಿ ರವಿಕುಮಾರ್ ಗೌಡ ಗಣಿಗ ಇಂಧನ ಇಲಾಖೆ ಬಗ್ಗೆ ಧ್ವನಿ ಎತ್ತಿ ಸದನದಲ್ಲಿ ಎಲ್ಲರ ಗಮನ ಸೆಳೆದರು. ಮಂಡ್ಯ ಜಿಲ್ಲೆ ವಿಧಾನಸಭಾ ಕ್ಷೇತ್ರದಲ್ಲಿ ವಿದ್ಯುತ್ ಕಂಬಗಳು ಮುರಿದು ಶಾರ್ಟ್ ಸರ್ಕ್ಯೂಟ್ ನಿಂದ ರೈತರ ಬೆಳೆಗಳು ಹಾನಿಗೀಡಾಗಿರುವ ಬಗ್ಗೆ ಹಾಗೂ ರೈತರ ಬೆಳೆಗಳಿಗೆ ಪರಿಹಾರ ನೀಡುವ ಬಗ್ಗೆ ಕಾಂಗ್ರೆಸ್ ಶಾಸಕ ರವಿ ಕುಮಾರಗೌಡ ಗಣಿಗ ಸಭೆಯಲ್ಲಿ ಆಗ್ರಹಿಸಿದರು.
ಈ ವಿಚಾರ ಸಂಬಂಧ ಪ್ರತಿಕ್ರಯಿಸಿದ ಇಂಧನ ಸಚಿವ ಕೆ ಜೆ ಜಾರ್ಜ್ ಆದಷ್ಟು ಬೇಗ ವರದಿ ತರಿಸಿಕೊಂಡು ಪರಿಹಾರ ನೀಡುತ್ತೇವೆಂದು ತಿಳಿಸಿದರು.
https://www.facebook.com/watch/?v=2482941288542752