ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತವಾಗಿ ಏಳನೇ ಬಾರಿಗೆ ಮಂಡಿಸಿರುವ ಆಯವ್ಯಯ ಸುಧಾರಣೆ, ಪ್ರಗತಿಯ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತದೆ ಎಂದು ವಿಧಾನಪರಿಷತ್ ಹಿರಿಯ ಸದಸ್ಯರಾದ ಜೆಡಿಎಸ್ ಹಿರಿಯ ನಾಯಕ ಟಿ. ಎ.ಶರವಣ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಬಡವರಿಗೆ, ರೈತರಿಗೆ, ಸಣ್ಣ ಮತ್ತು ಮದ್ಯಮ ಕೈಗಾರಿಕೆ ಗಳ ಅಭಿವೃದ್ದಿ ಪರ ಈ ಬಜೆಟ್ ಇದೇ ಎಂದು ಶರವಣ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಚಿನ್ನದ ಮೇಲೆ ಅಬಕಾರಿ ಸುಂಕವನ್ನು ರದ್ದು ಪಡಿಸಿರುವ ಕ್ರಮ ಅತ್ಯಂತ ಮಹತ್ವದ ನಿರ್ಧಾರವಾಗಿದೆ ಎಂದು ಸ್ವಾಗತಿಸಿದ್ದಾರೆ.
ನಿರುದ್ಯೋಗ ನಿವಾರಣೆಯ ನಿಟ್ಟಿನಲ್ಲಿ, ಲಕ್ಷಾಂತರ ಹುದ್ದೆ ಸೃಷ್ಟಿಸುವ ದೃಷ್ಟಿಯಲ್ಲಿ ಯುವಕರ ಪಾಲಿಗೆ ಅಧ್ಬುತ ಅವಕಾಶಗಳನ್ನು ಸೃಷ್ಟಿಸುವ ಸಂಜೀವಿನಿ ಬಜೆಟ್ ನ್ನ ಪ್ರಧಾನಿ ಮೋದಿ ಸಾರಥ್ಯದ ಕೇಂದ್ರ ಸರಕಾರ ಕೊಡುವ ಮೂಲಕ ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುವ ಪ್ರಯತ್ನ ನಡೆಸಲಾಗಿದೆ ಎಂದು ಶರವಣ ಬಣ್ಣಿಸಿದ್ದಾರೆ.
ರೈತರ ಪಾಲಿಗಂತೂ ಇದು ಅವರಿಗೆ ನೆಮ್ಮದಿ ತಂದು ಕೊಡುವ ಅಮೋಘ ಬಜೆಟ್ ಎಂದು ವಿಶ್ಲೇಷಣೆ ಮಾಡಿರುವ ಶರವಣ ಕನಿಷ್ಠ ಬೆಂಬಲ ಬೆಲೆಯನ್ನು ಎತ್ತಿ ಹಿಡಿಯುವ ರೈತ ಸ್ನೇಹಿ ಆಯವ್ಯಯ ಎಂದಿದ್ದಾರೆ.
ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಭಾರಿ ಮಟ್ಟದಲ್ಲಿ ಅವಕಾಶ ಕಲ್ಪಿಸುವ ವಿಕಸಿತ ಭಾರತದ ಕನಸನ್ನು ನನಸು ಮಾಡುವ ದೂರದೃಷ್ಟಿಯ ಬಜೆಟ್ ಇದಾಗಿದೆ. ಸಧೃಢ ಭಾರತವನ್ನು ಕಟ್ಟುವ ಅದ್ಭುತ ಆಯವ್ಯಯ ಇದು ಎಂದು ಶರವಣ ಕೊoಡಾಡಿದ್ದಾರೆ.
ಬಡವರಿಗಾಗಿ ಆಹಾರ ಭದ್ರತೆಗಾಗಿ ಪಣ ತೊಡುವ ಬಜೆಟ್ನ್ನು ಉಚಿತ ಆಹಾರ ಧಾನ್ಯವನ್ನು ಬರುವ ಐದು ವರ್ಷಕ್ಕೆ ವಿಸ್ತರಿಸಿ, ಇಡೀ ಭಾರತವನ್ನೇ ಹಸಿವು ಮುಕ್ತ ಮಾಡುವ ಸಂಕಲ್ಪ ಈ ಬಜೆಟ್ ಹಿಂದಿದೆ. ನೀರಾವರಿ ಯೋಜನೆಗಳಿಗೆ ಈ ಬಾರಿ ಭಾರಿ ಆದ್ಯತೆ ನೀಡಲಾಗಿದೆ. ಮೂಲಭೂತ ಸೌಕರ್ಯ ಗಳಿಗೆ ಆದ್ಯತೆ ಕಲ್ಪಿಸಲಾಗಿದೆ ಎಂದು ಶರವಣ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸಿದರು. ಇದರ ಜೊತೆ ಮದ್ಯಮ ವರ್ಗಕ್ಕೆ ಬಂಪರ್ ಕೊಡುಗೆ ನೀಡಿರುವ ಹೊಸ ತೆರಿಗೆ ಪದ್ಧತಿ ದುಡಿಯುವ ವರ್ಗಕ್ಕೆ ಹರ್ಷ ತಂದಿದೆ. ಇದನ್ನು ತಾವು ಹೃತ್ಪೂರ್ವಕ ವಾಗಿ ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ.