ಹಸಿರು ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ತರಕಾರಿಗಳು ಎಲ್ಲಾ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಹೊಂದಿರುತ್ತವೆ, ಇದು ದೇಹದ ಉತ್ತಮ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ. ಅಂತಹ ಪ್ರಯೋಜನಕಾರಿ ತರಕಾರಿಗಳಲ್ಲಿ ಸೋರೆಕಾಯಿ ಕೂಡಾ ಒಂದು . ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಸೋರೆಕಾಯಿಯನ್ನು ವಾರಕ್ಕೊಮ್ಮೆ ತಿಂದರೆ ಮಲಬದ್ಧತೆ ಮೂಲವ್ಯಾಧಿ ಇತ್ಯಾದಿ ತೊಂದರೆಯಿಂದ ಗುಣಮುಖರಾಗಬಹುದು ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಜೊತೆಗೆ ವಿಟಮಿನ್ ಬಿ ಮತ್ತೆ ಸಿ ಇದರಲ್ಲಿ ಸಮೃದ್ಧವಾಗಿದೆ ಮೈಯ ತಿರುಳನ್ನು ಕತ್ತರಿಸಿ ಅದಕ್ಕೆ ಒಂದು ಚಮಚ ನಿಂಬೆರಸ ಸೇರಿಸಿ ಕುಡಿದರೆ ಕಿಡ್ನಿ ಸ್ಟೋನ್ ಮೂತ್ರ ವಿಸರ್ಜನೆ ಪದೇ ಪದೇ ಬಾಯಾರಿಕೆ ಇಂತಹದುಗಳಿಗೆ ನಾವು ಗುಡ್ ಬೈ ಹೇಳಬಹುದು
ಈ ಸೋರೆಕಾಯಿ ಆರೋಗ್ಯ ಮಾತ್ರವಲ್ಲದೆ ಸೌಂದರ್ಯ ಸಂಬಂಧಿ ಸಮಸ್ಯೆಗಳನ್ನು ನಿಭಾಯಿಸುತ್ತದೆ. ಇದರ ನಿಯಮಿತ ಸೇವನೆಯು ಬಿಳಿ ಕೂದಲು ಮತ್ತು ಚರ್ಮದ ಸುಕ್ಕುಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಸೋರೆಕಾಯಿ ರಸವನ್ನು ನೆತ್ತಿಯ ಮೇಲೆ ಹಚ್ಚುವುದರಿಂದ ಬೋಳು ತಲೆ ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.