ತುಮಕೂರು: ಡೆಂಘಿಗೆ ಸೋಂಕಿಗೆ ತುಮಕೂರು ಜಿಲ್ಲೆಯಲ್ಲಿ ಮೊದಲಿ ಬಲಿಯಾಗಿದೆ. ಗುಣಶ್ರೀ (19) ಮೃತ ದುರ್ದೈವಿಯಾಗಿದ್ದು, ತುಮಕೂರು ನಗರದ ಶಾಂತಿನಗರ ಕುಂಟಯ್ಯನ ತೋಟ ಬಡಾವಣೆಯ ರಾಜು ಎಂಬುವವರ ಪುತ್ರಿಯಾಗಿದ್ದು, ಗುಣಶ್ರೀಗೆ ಜು.12ರಂದು ಜ್ವರ ಕಾಣಿಸಿಕೊಂಡಿತ್ತು.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜು.17ಕ್ಕೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಜು.18 ರಂದು ಸಿದ್ದಗಂಗಾ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಭಾನುವಾರ ಸಂಜೆ ಸಾವನ್ನಪ್ಪಿದ್ದಾಳೆ. ಡೆಂಘಿಯಿಂದ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ದೃಢಪಡಿಸಿದೆ.