ಇತ್ತೀಚೆಗೆ ಮದುವೆ ಡಿವೋರ್ಸ್ ಅನ್ನೋದು ಕಾಮನ್ ಆಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ, ಅಥವಾ ವರ್ಷಗಳಲ್ಲಿ ದಂಪತಿಗಳು ದೂರ ದೂರವಾಗುತ್ತಾರೆ. ಆದರೆ ಇಲ್ಲೊಂದು ಜೋಡಿ ಮದುವೆಯಾದ ಮೂರೇ ನಿಮಿಷಯಕ್ಕೆ ವಿಚ್ಚೇಧನ ಘೋಷಿಸಿದ್ದಾರೆ.
ಯುವತಿಯೊಬ್ಬಳು ಮದುವೆಯಾದ ಮೂರೇ ನಿಮಿಷಕ್ಕೆ ಮದುವೆ ಮಂಟಪದಲ್ಲೇ ಪತಿಗೆ ತಲಾಖ್ ನೀಡಿದ ಘಟನೆ ಕುವೈತ್ ನಲ್ಲಿ ನಡೆದಿದೆ.. ಸದ್ಯ ಈ ಘಟನೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವರದಿಗಳ ಪ್ರಕಾರ, ಮದುವೆ ಸಮಾರಂಭದ ವೇಳೆ ವಧು ಎಡವಿ ಬಿದ್ದಿದ್ದು, ಈ ಸಮಯದಲ್ಲಿ ವರ ತನ್ನ ಕುಟುಂಬದಲ್ಲಿ ಸಮ್ಮುಖದಲ್ಲಿ ಆಕೆಯನ್ನು ಹೀಯಾಳಿಸಿದ್ದಾನೆ. ಎಲ್ಲರ ಮುಂದೆ ಅವಮಾನಕ್ಕೊಳಗಾದ ಯುವತಿ ಅದೇ ಮಂಟಪದಲ್ಲಿ ತನ್ನ ಪತಿಗೆ ತಲಾಖ್ ನೀಡಿ ಅಲ್ಲಿಂದ ಓಡಿ ಹೋಗಿದ್ದಾಳೆ ಎನ್ನಲಾಗಿದೆ.
ಇಸ್ಲಾಮಿಕ್ ಕಾನೂನಿನಲ್ಲಿ, ತ್ವರಿತ ವಿಚ್ಛೇದನದ ಪ್ರಕ್ರಿಯೆಯನ್ನು “ತಲಾಕ್-ಎ-ಬಿದ್ದತ್” ಎಂದು ಕರೆಯಲಾಗುತ್ತದೆ. ಅಲ್ಲಿ ಪತಿ ತಕ್ಷಣವೇ ಮದುವೆಯನ್ನು ರದ್ದು ಮಾಡಲು “ತಲಾಕ್” ಅನ್ನು ಮೂರು ಬಾರಿ ಹೇಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪತ್ನಿಯರು ತಲಾಖ್ ನೀಡುವ ಘಟನೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಸದ್ಯ ಈ ಮೂರು ನಿಮಿಷದ ಮದುವೆ ಹಾಗೂ ವಿವಾಹ ವಿಚ್ಛೇದನ ಇತಿಹಾಸದಲ್ಲೇ ಅತ್ಯಂತ ಚಿಕ್ಕ ಮದುವೆ ಎಂದು ಹೇಳಲಾಗುತ್ತಿದೆ.