ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ (Union Budget) ಭಾಷಣ ಮುಗಿದ ಬೆನ್ನಲ್ಲೇ ಚಿನ್ನ (Gold) ಮತ್ತು ಬೆಳ್ಳಿ (Silver) ದರದಲ್ಲಿ ಭಾರೀ ಇಳಿಕೆಯಾಗಿದೆ.
ಮಲ್ಟಿ ಕಮೊಡಿಟಿ ಎಕ್ಸ್ಚೇಂಜ್ನಲ್ಲಿ(MCX) 10 ಗ್ರಾಂ ಚಿನ್ನದ ಬೆಲೆ 3,916 ರೂ. ಇಳಿಕೆಯಾಗಿದ್ದರೆ 1 ಕೆಜಿ ಬೆಳ್ಳಿ ದರ 4,213 ರೂ.
ಇಳಿಕೆಯಾಗಿದೆ. ಅಂತಿಮವಾಗಿ 10 ಗ್ರಾಂ ಚಿನ್ನದ ದರ 68,789 ರೂ. ಕೊನೆಯಾದರೆ 1 ಕೆಜಿ ಬೆಳ್ಳಿ ದರ 84,990 ರೂ.ನಲ್ಲಿ ಅಂತ್ಯವಾಗಿದೆ.
ಬಜೆಟ್ ಪ್ರಸ್ತಾಪ ಅಲ್ಲದೇ ವಿಶ್ವದೆಲ್ಲೆಡೆ ನಡೆಯುತ್ತಿರುವ ಹಲವು ವಿದ್ಯಮಾನಗಳಿಂದ ಚಿನ್ನ ಬೆಳ್ಳಿ ದರ ಇಳಿಕೆಯಾಗುತ್ತಿದೆ. ಈ ಬಜೆಟ್ನಲ್ಲಿ ಚಿನ್ನ (Gold) ಮತ್ತು ಬೆಳ್ಳಿಯ (Silver) ಆಮದು ಸುಂಕವನ್ನು ಕಡಿತ ಮಾಡಿದ್ದರಿಂದ ಆಭರಣಗಳ ದರ ಇಳಿಕೆಯಾಗಲಿದೆ.
ಈ ಮೊದಲು ಚಿನ್ನ ಮತ್ತು ಬೆಳ್ಳಿಗೆ 15% ಆಮದು ಸುಂಕ (Customs Duty) ವಿಧಿಸಲಾಗುತ್ತಿತ್ತು. ಆದರೆ ಈಗ ಆಮದು ಸುಂಕವನ್ನು 6% ಇಳಿಕೆ ಮಾಡಲಾಗಿದೆ.
ದೇಶದಲ್ಲಿ ಚಿನ್ನ ಮತ್ತು ಬೆಲೆಬಾಳುವ ಲೋಹದ ಆಭರಣಗಳಲ್ಲಿ ದೇಶೀಯ ಮೌಲ್ಯವರ್ಧನೆ ಹೆಚ್ಚಿಸಲು ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು 6% ಕ್ಕೆ ಮತ್ತು ಪ್ಲಾಟಿನಂ ಮೇಲೆ 6.4% ಕ್ಕೆ ಇಳಿಸಲು ನಾನು ಪ್ರಸ್ತಾಪಿಸುತ್ತೇನೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ (Budget Speech) ಹೇಳಿದರು.