ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂನಿಂದ ನೀರು ಬಿಡುಗಡೆ ವೇಳೆ ನಿರ್ಲಕ್ಷ್ಯ ತೋರಿದ್ದರಿಂದ ಗೋಡೆ ಕುಸಿದಿದೆ. ನೀರಿನ ರಭಸಕ್ಕೆ ನಗುವನ ತೋಟದ ತಡೆಗೋಡೆ ಕೊಚ್ಚಿಹೋಗಿದೆ. ನೀರು ಬಿಟ್ರೆ ತೋಟಕ್ಕೆ ತೊಂದರೆ ಆಗಬಾರದೆಂದು ಈ ತಡೆಗೋಡೆ ಕಟ್ಟಲಾಗಿತ್ತು.
ಇತ್ತೀಚೆಗಷ್ಟೇ ಲಕ್ಷಾಂತರ ರೂ. ವೆಚ್ಚದಲ್ಲಿ ಈ ತಡೆಗೋಡೆ ನಿರ್ಮಿಸಲಾಗಿತ್ತು. ಗೇಟ್ನಿಂದ ಒಮ್ಮೆಯೇ ಹೆಚ್ಚಿನ ನೀರು ಬಿಟ್ಟಿದ್ದರಿಂದ ಗೋಡೆ ಕುಸಿದಿದೆ. ನಿಧಾನವಾಗಿ ನೀರಿನ ಪ್ರಮಾಣ ಹೆಚ್ಚಿಸಿದ್ರೆ ತೊಂದರೆ ಆಗುತ್ತಿರಲಿಲ್ಲ. ಹೀಗಾಗಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ತಡೆಗೋಡೆ ಕುಸಿದಿದೆ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.