ತಾಯಿ ಮಮತೆಯ ದೃಶ್ಯವಿದು. ತಾಯಿಯ ಶಕ್ತಿಯ ಎದುರು ಬೇಟೆಗೆ ಬಂದಿದ್ದ ಸಿಂಹಿಣಿಯೇ ಓಡಿ ಹೋಗಿತ್ತು. ತಾಯಿಯ ಧೈರ್ಯದಿಂದ ಪುಟಾಣಿ ಜಿರಾಫೆಯ ಜೀವ ಉಳಿದಿತ್ತು.
ಪ್ರಾಣಿಗಳ ಬದುಕಿಗೆ ಸಂಬಂಧಿಸಿದ ಸಾಕಷ್ಟು ದೃಶ್ಯಗಳು ಸದಾ ಸೋಶಿಯಲ್ ಮೀಡಿಯಾದಲ್ಲಿ ನಮಗೆ ಕಾಣಸಿಗುತ್ತವೆ. ಹೀಗೆ ಕಾಣಸಿಗುವ ದೃಶ್ಯಗಳು ಸಹಜವಾಗಿಯೇ ನಮ್ಮನ್ನು ಸೆಳೆಯುತ್ತವೆ. ಜತೆಗೆ, ಮತ್ತೆ ಮತ್ತೆ ನೋಡುವಂತೆಯೂ ಮಾಡುತ್ತವೆ. ಪ್ರಾಣಿಗಳ ತಾಯಿ ಮಮತೆಗೆ ಸಾಕ್ಷಿಯಾದ ಸಾಕಷ್ಟು ದೃಶ್ಯಗಳನ್ನು ನೀವು ಕೂಡಾ ಹಲವು ಸಲ ನೋಡಿರಬಹುದು. ಇದು ಕೂಡಾ ಅದೇ ಸಾಲಿಗೆ ಸೇರುವ ದೃಶ್ಯ. ಅಮ್ಮನ ಪ್ರೀತಿ, ಶಕ್ತಿಯ ದೃಶ್ಯ ಇದು. ಈ ಶಕ್ತಿಯ ಎದುರು ಬಲಶಾಲಿ ಸಿಂಹಿಣಿಯ ಆಟವೂ ನಡೆಯಲಿಲ್ಲ. ಯಾಕೆಂದರೆ, ಬೇಟೆಗೆ ಬಂದಿದ್ದ ಸಿಂಹಿಣಿ ಅರೆಕ್ಷಣದಲ್ಲಿ ಅಲ್ಲಿಂದ ಓಡಿ ಹೋಗಿತ್ತು.