2024 ರಲ್ಲಿ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ಗಳ ಪಟ್ಟಿಯನ್ನು ಹೆನ್ಲಿ ಪಾಸ್ಪೋರ್ಟ್ ಸೂಚ್ಯಂಕ ಬಿಡುಗಡೆ ಮಾಡಿದೆ. ಶಕ್ತಿಯುತವಾದ ಪಾಸ್ಪೋರ್ಟ್ ಹೊಂದಿರುವ ನಾಗರಿಕರು ವೀಸಾದ ಅಗತ್ಯವಿಲ್ಲದೆ ಪ್ರಪಂಚದಾದ್ಯಂತ ಮುಕ್ತವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಇದರಿಂದಲೇ ಶ್ರೇಯಾಂಕವನ್ನು ನಿರ್ಧರಿಸಲಾಗುತ್ತದೆ. ಈ ವರ್ಷ ಹೆನ್ಲಿ ಪಾಸ್ಪೋರ್ಟ್ ಇಂಡೆಕ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಫ್ರಾನ್ಸ್ ಅಗ್ರಸ್ಥಾನ ಪಡೆದುಕೊಂಡರೆ 84ನೇ ಸ್ಥಾನದಲ್ಲಿ ಭಾರವಿದೆ.
ಶ್ರೇಯಾಂಕವು ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (IATA) ದ ಡೇಟಾವನ್ನು ಆಧರಿಸಿದ್ದು, IATA ಪ್ರಪಂಚದಾದ್ಯಂತ ಪ್ರಯಾಣ ಮಾಹಿತಿಯ ಅತ್ಯಂತ ವ್ಯಾಪಕವಾದ ಮತ್ತು ನಿಖರವಾದ ಡೇಟಾಬೇಸ್ ನ್ನು ಹೊಂದಿದೆ.
ಈ ವರ್ಷ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸ್ಪೇನ್ ಮತ್ತು ಸಿಂಗಾಪುರ್ ಪವರ್ಫುಲ್ ಪಾಸ್ಪೋರ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದುಕೊಂಡಿವೆ. ಆದರೆ ಭಾರತ 84ರಿಂದ 85ನೇ ಸ್ಥಾನಕ್ಕೆ ಕುಸಿದಿದೆ. 2023 ರಲ್ಲಿ ಭಾರತೀಯರು 60 ರಾಷ್ಟ್ರಗಳಿಗೆ ವೀಸಾ ಮುಕ್ತ ಪ್ರವೇಶ ಪಡೆದಿದ್ದರು. ಆದರೆ ಈ ವರ್ಷ 62 ಕ್ಕೆ ಹೆಚ್ಚಾದರೂ, ಶ್ರೇಯಾಂಕದಲ್ಲಿ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಕುಸಿತ ಕಂಡಿದೆ.