ಹರಿಯಾಣ: ಹರಿಯಾಣದ ಫರೀದಾಬಾದ್ ಜಿಲ್ಲೆಯಲ್ಲಿ ಒಂದರ ಹಿಂದೊಂದರಂತೆ ಭೂಕಂಪನಗಳು ಸಂಭವಿಸಿದೆ. ದೆಹಲಿ-ಎನ್ಸಿಆರ್ʼನಾದ್ಯಂತ ಕಂಪನದ ಅನುಭವವಾಗಿದೆ. ಫರಿದಾಬಾದ್ ಜಿಲ್ಲೆಯಲ್ಲಿ ಗುರುವಾರ ಎರಡು ಬಾರಿ ಭೂಮಿ ಕಂಪಿಸಿದೆ.
ರಾಷ್ಟ್ರೀಯ ಭೂಕಂಪನಶಾಸ್ತ್ರದ ಕೇಂದ್ರದ ಮಾಹಿತಿಯ ಪ್ರಕಾರ, ಮೊದಲ ಕಂಪನವು ಬೆಳಗ್ಗೆ 10.54ಕ್ಕೆ ಸಂಭವಿಸಿದೆ, ಇದಾಗಿ ಗಂಟೆಯೊಳಗೆ ಎರಡನೆಯ ಬಾರಿಗೆ 11.43ಕ್ಕೆ ಭೂಮಿ ಕಂಪಿಸಿದೆ. ದೇಶದ ರಾಜಧಾನಿ ದೆಹಲಿ-ಎನ್ಸಿಆರ್ನ ಹಲವಾರು ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.