ಬೆಂಗಳೂರು: ಬಿಜೆಪಿಯವರು ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಬಂಧನ ಮಾಡಿದ್ರೆ ಜನ ದಂಗೆ ಏಳ್ತಾರೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ಅವರನ್ನ ಬಂಧಿಸಿದ್ರೆ ಅದರ ಪರಿಣಾಮ ಬಿಜೆಪಿ ಎದುರಿಸಬೇಕಾಗುತ್ತೆ.
ನಮ್ಮ ತನಿಖಾ ಸಂಸ್ಥೆಗಳ ಮೇಲೆ ಇವರಿಗೆ ವಿಶ್ವಾಸ ಇಲ್ವಾ? ತನಿಖೆಗೆ ಕೊಟ್ರೆ ನಮ್ಮ ಬಳಿ ಅಧಿಕಾರಿಗಳು ಇಲ್ಲ ಅಂತಾ ಸಿಬಿಐನವ್ರೇ ಹೇಳ್ತಾರೆ. ಸಿದ್ದರಾಮಯ್ಯನವ್ರನ್ನ ಮುಂದುವರೆಸೋದು ಪಕ್ಷದ ಆಂತರಿಕ ವಿಚಾರ ಆದ್ರೆ ಸರ್ಕಾರವನ್ನ ಬಿಜೆಪಿಯಿಂದ ಅಸ್ಥಿರ ಮಾಡೋ ಪ್ರಯತ್ನ ನಡೀತಿದೆ ಎಂದರು.
ಇನ್ನು NDAಯೇತರ ರಾಜ್ಯಗಳನ್ನ ಬಜೆಟ್ನಲ್ಲಿ ಕಡೆಗಣನೆ ಮಾಡಲಾಗಿದೆ ಅದರ ಬಗ್ಗೆ ಇವ್ರು ಚರ್ಚೆಗಳು ಮಾಡ್ತಿಲ್ಲ, ಅಸೆಂಬ್ಲಿಯಲ್ಲಿ ಭಜನೆ ಮಾಡದೇ ಇನ್ನೇನು ಮಾಡ್ತಾರೆ ಹೇಳಿ..? ಎಂದು ಆಕ್ರೋಶ ವ್ಯಕ್ತಪಡಿಸಿದರು.