ಚಿತ್ರದುರ್ಗ: ಬೆಂಗಳೂರಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಹಿನ್ನೆಲೆ ನಟ ವಿನೋದ್ ರಾಜ್ , ರೇಣುಕಾಸ್ವಾಮಿ ಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಚಿತ್ರರಂಗದ ಕೆಲ ನಿರ್ದೇಶಕರ ಜೊತೆ ಬೆಳಗ್ಗೆ ಚಿತ್ರದುರ್ಗಕ್ಕೆ ಆಗಮಿಸಿ ವಿಆರ್ ಎಸ್ ಬಡಾವಣೆಯಲ್ಲಿರುವ ಸ್ವಾಮಿ ಮನೆಗೆ ಭೇಟಿ ನೀಡಿದರು. ಇದೇ ವೇಳೆ ಸ್ವಾಮಿ ತಂದೆ-ತಾಯಿ, ಪತ್ನಿ , ಪೋಷಕರಿಗೆ ಆತ್ಮಸ್ಥೈರ್ಯ ತುಂಬಿ ಸಾಂತ್ವಾನ ಹೇಳಿ ಆರ್ಥಿಕ ನೆರವು ನೀಡಿದ್ದಾರೆ.
ಮಾನವೀಯತೆ ಎಲ್ಲಿ ಹೋಗಿದೆ
ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ವಿನೋದ್ ರಾಜ್, ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಮನೆಗೆ ಆಧಾರವಾಗಿದ್ದ ಮಗನ ಕಳೆದುಕೊಂಡು ನೋವಿನಲ್ಲಿದ್ದಾರೆ, ಇಂತಹ ಘಟನೆ ನಡೆದು ಹೋಗಬಾರದಿತ್ತು. ಒಂದು ಜೀವ ತೆಗೆಯಲು ಯಾರಿಗೂ ಹಕ್ಕು ಇಲ್ಲ. ಮಾನವೀಯತೆ ಎಲ್ಲಿ ಹೋಗಿದೆ ಅನ್ನೋದು ಪ್ರಶ್ನೆ, ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡ್ತಾರೆ. ಕಲಾವಿದರು ಒಳ್ಳೆಯದನ್ನೇ ಜನರಿಗೆ ಕೊಡುವ ಕೆಲಸ ಮಾಡ್ಬೇಕು. ಕಲಾವಿದರು ಎಂಬ ಪಟ್ಟ ಕೊಟ್ಟು ಜವಾಬ್ದಾರಿ ಕೊಟ್ಟಿದ್ದಾರೆ ಜನ, ನಾವು ಏನು ಮಾಡಿದರೂ ಜನ ನೋಡ್ತಾರೆ. ನಾವು ವಿವೇಕದಿಂದ ಮಾತಾಡಬೇಕು, ಒಳ್ಳೆ ಕೆಲಸ ಮಾಡ್ಬೇಕು ಎಂದು ಹೇಳಿದರು.
ನರೇಶ್ಗೆ ಕೈ ಕೊಟ್ರಾ ನಟಿ ಪವಿತ್ರಾ ಲೋಕೇಶ್?ಇನ್ನಷ್ಟು ಸುದ್ದಿ…
ನನ್ನ ನೋಡಿ ಭಾವುಕರಾಗಿ ದರ್ಶನ್ ಕಣ್ಣೀರು ಹಾಕಿದ್ದರು
ಅಲ್ಲದೇ, ನಮ್ಮ ತನ ಕಳೆದುಕೊಂಡಾಗ ಇಂತ ಕೆಲಸಗಳು ಆಗುತ್ತವೆ, ಆದಷ್ಟು ನಾವು ಸಮಾಜದಲ್ಲಿ ಇದ್ದೇವೆ ಎಂದು ಬದುಕಬೇಕು. ಜನಗಳ ಮಧ್ಯೆ ಬದುಕುವುದು ಹೇಗೆ ಎಂಬುದನ್ನು ಕಲಾವಿದರು ತಿಳಿಯಬೇಕು. ಹಿಂದಿನ ತಲೆಮಾರಿನವರನ್ನು ನೋಡಿ ನಾವು ಕಲಿಬೇಕು, ಮಾಧ್ಯಮಗಳು ತಿದ್ದಿ ಬುದ್ಧಿ ಹೇಳುವ ಕೆಲಸ ಮಾಡುತ್ತಿವೆ. ಮಾಧ್ಯಮಗಳು ಯಾರಿಗೂ ಶತ್ರು ಅಲ್ಲ, ಜೈಲಿನಲ್ಲಿ ಹೆಚ್ಚಾಗಿ ಮಾತಾಡಲು ಅವಕಾಶ ಕೊಡಲಿಲ್ಲ. ಸಂಕಟ ವ್ಯಕ್ತಪಡಿಸಿದರು ಅಷ್ಟೇ ಇನ್ನೇನು ಮಾತಾಡಿಲ್ಲ, ತಬ್ಬಿಕೊಂಡು ತಮ್ಮ ಪಶ್ಚಾತ್ತಾಪ ವ್ಯಕ್ತಪಡಿಸಿದರು. ನನ್ನ ನೋಡಿ ಭಾವುಕರಾಗಿ ದರ್ಶನ್ ಕಣ್ಣೀರು ಹಾಕಿದ್ದರು. ದರ್ಶನ್ ಒಂದು ರೀತಿಯ ನೋವಾದರೆ ಇವರ ಕುಟುಂಬದವರದ್ದು ಭಯಂಕರ ನೋವು. ಮನೆಯಲ್ಲಿನ ಕಷ್ಟಗಳನ್ನು ನೋಡಿ ಕಣ್ಣೀರು ಬಂತು ನನಗೆ ಎಂದು ಮಾತನಾಡುತ್ತಾ ಭಾವುಕರಾಗಿ ಕಣ್ಣೀರಿಟ್ಟರು.