ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕದಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು, ಹಲವೆಡೆ ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ. ಅದರಂತೆ
ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ 10ನೇ ತಿರುವಿನಲ್ಲಿ ಗುಡ್ಡ ಕುಸಿದಿದ್ದು ಚಾರ್ಮಾಡಿ ಘಾಟ್ನಿಂದ ಕೊಟ್ಟಿಗೆಹಾರದವರೆಗೂ ವಾಹನಗಳು ನಿಂತಲ್ಲೇ ನಿಂತಿದ್ದವು.
ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯಾಚರಣೆ ನಡೆಸಲಾಯ್ತು. ಮಂಗಳೂರಿಗೆ ತೆರಳುವವರನ್ನು ಪೊಲೀಸರು ಕೊಟ್ಟಿಗೆಹಾರದಲ್ಲೇ ತಡೆದು ವಾಪಸ್ ಕಳಿಸಿದ್ದಾರೆ.
ಇನ್ನೂ ಕೆಆರ್ಎಸ್ನಿಂದ 90 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಶ್ರೀರಂಗಪಟ್ಟಣದ ಕೋಟೆ ಗಣಪತಿ ದೇಗುಲ ಮುಳುಗಡೆಯಾಗಿದೆ. ಇನ್ನು ಗಂಜಾಂನಲ್ಲಿರುವ ನಿಮಿಷಾಂಬ ದೇಗುಲ ಸ್ನಾನಘಟ್ಟ ಜಲಾವೃತವಾಗಿದೆ