ಬೆಂಗಳೂರು: ರೌಡಿಶೀಟರ್ ಸೈಲೆಂಟ್ ಸುನೀಲ್ ಜೊತೆ (Rowdy Sheeter Silent Sunil) ಬಿಜೆಪಿ ಸಂಸದರು ಮತ್ತು ಶಾಸಕರು (BJP Leaders) ವೇದಿಕೆ ಹಂಚಿಕೊಂಡಿದ್ದ ಸುದ್ದಿ ರಾಷ್ಟ್ರಮಟ್ಟದಲ್ಲಿಯೂ ಸದ್ದು ಮಾಡಿತ್ತು.
ಈ ಬಗ್ಗೆ ಕಾಂಗ್ರೆಸ್ ಸಾಲು ಸಾಲು ಟ್ವೀಟ್ (Congress Tweet) ಮೂಲಕ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿತ್ತು. ಹಾಗಾಗಿ ಡ್ಯಾಮೇಜ್ ಕಂಟ್ರೋಲ್ಗೆ ಬಿಜೆಪಿ ಮುಂದಾಗಿದ್ದು, ಸೈಲೆಂಟ್ ಸುನೀಲ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕೃತ ಹೇಳಿಕೆ ಕೂಡ ನೀಡಿದ್ದರು.
ಸೈಲೆಂಟ್ ಸುನೀಲ್ನನ್ನು ಯಾವುದೇ ಕಾರಣಕ್ಕೆ ಪಕ್ಷಕ್ಕೆ ಸೇರಿಸುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು.
ಅಂದು ಬಿಜೆಪಿ ಶಾಸಕರು, ಸಚಿವರು ಹೇಳಿದ್ದೆ ಒಂದು, ಇಂದು ಆಗಿದ್ದೇ ಬೇರೆ ಏನಂದರೆ ಇಂದು ರೌಡಿಶೀಟರ್ ಸೈಲೆಂಟ್ ಸುನೀಲ್ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಿದ್ದಾರೆ.
ಹಲವು ದಿನಗಳಿಂದ ಈ ಸುದ್ದಿ ಎಲ್ಲಾ ಕಡೆ ಓಡಾಡುತ್ತಿದ್ದರು ಬಿಜೆಪಿ ಪಕ್ಷದವರು ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲದಂತೆ ಬಾಯಿಗೆ ಬಂದ ರೀತಿ ಹೇಳಿಕೆ ಕೊಡುತ್ತಿದ್ದರು ಆದರೆ ಇಂದು ಅದಕ್ಕೆಲ್ಲಾ ಒಂದು ಉತ್ತರ ಸಿಕ್ಕಿದೆ ಅದೇನೆಂದರೆ ಅಧಿಕೃತವಾಗಿ ಸೈಲೆಂಟ್ ಸುನೀಲ ಬಿಜೆಪಿ ಸೇರ್ಪಡೆಯಾಗಿದ್ದು ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸುವುದನ್ನ ನಾವು ಕಾಣಬಹುದು.
ಮೊದಲಿನಿಂದಲೂ ಚಾಮರಾಜಪೇಟೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಸೈಲೆಂಟ್ ಸುನೀಲ, ೀಗ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದು ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನದ ನೊಂದಣಿ ಸಂಖ್ಯೆಗೆ ಕರೆ ಮಾಡಿ ಮೆಂಬರ್ ಶಿಪ್ ಕೂಡ ಪಡೆದುಕೊಂಡಿದ್ದಾರೆ.
ಎಸ್ ಟಿ ಯುವಮೋರ್ಚಾ ಮಂಡಲ ಅಧ್ಯಕ್ಷ ಗಿರೀಶ್ ನೇತೃತ್ವದ ಅವರ ಕಚೇರಿಯಲ್ಲೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಇಷ್ಟು ದಿನ ಕನ್ನಡ ಶಾಲು ಕೇಸರಿ ಶಾಲು ಧರಿಸ್ತಿದ್ದ ಸುನೀಲನ ಹೆಗಲಿಗೆ ಸದ್ಯ ಬಿಜೆಪಿ ಪಕ್ಷದ ಶಾಲು ಬಿದ್ದಿದೆ. ಸದ್ಯ ಚಾಮರಾಜಪೇಟೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರೋ ರೌಡಿಶೀಟರ್ ಸುನೀಲನಿಗೆ ಟಿಕೆಟ್ ಸಿಗುತ್ತೋ ಸಿಗಲ್ವೋ ಎನ್ನುವುದು ಕುತೂಹಲಕಾರಿಯಾಗಿದೆ.
ರೌಡಿಶೀಟರ್ ಸುನೀಲ ಬಿಜೆಪಿ ಸೇರ್ಪಡೆಯಿಂದ ವಿರೋಧ ಪಕ್ಷದವರಿಗೆ ಒಂದು ಹೊಸ ಅಸ್ತ್ರ ಸಿಕ್ಕಿದಂತಾಗಿದೆ.ಇದರಿಂದ ಬಿಜೆಪಿ ನಾಯಕರು ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.