ಬೆಂಗಳೂರು: ರಾಜಸ್ತಾನದಿಂದ ದಿನನಿತ್ಯ ರೈಲಿನ ಮುಖಾಂತರ ಕುರಿ ಮಾಂಸ ಹಾಗೂ ಮೀನಿನ ಜೊತೆ ಸಾವಿರಾರು ಕೆ.ಜಿ.ನಾಯಿ ಮಾಂಸ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕುರಿಮಾಂಸವಾದರೂ ಹಾಳಾಗಿರುವ ಸಾಧ್ಯತೆಯಿದ್ದು ಕ್ರಮಬದ್ಧವಾಗಿ ಸಾಗಾಟ ಮಾಡುತ್ತಿಲ್ಲ ಎಂಬ ಆಪಾದನೆ ಕೇಳಿಬಂದಿದ್ದು ಇದನ್ನೇ ನಗರ ಹೊಟೇಲ್ ರೆಸ್ಟೋರೆಂಟ್ ಗಳಿಗೆ ಮಾರಾಟ ಮಾಡಿ ಅವ್ಯವಹಾತವಾಗಿ ದಂಧೆ ನಡೆಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಇನ್ನೂ ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಲು ಮಾಂಸದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಮಾಂಸ ಕುರಿತು ಎದ್ದಿರುವ ವಿವಾದದ ಬಗ್ಗೆ ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ನೀಡಿದ್ಧಾರೆ. ಒಟ್ಟು 90 ಬಾಕ್ಸ್ ಪರಿಶೀಲಿಸಿದಾಗ ಪ್ರಾಣಿ ಮಾಂಸವೆಂದು ಕಂಡು ಬಂದಿದೆ. ಇದು ಯಾವ ಪ್ರಾಣಿಯ ಮಾಂಸ ಎಂದು ಖಚಿತಪಡಿಸಿಕೊಳ್ಳಲು ಮಾಂಸದ ಮಾದರಿ ಸಂಗ್ರಹಿಸಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ವರದಿ ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜಸ್ಥಾನದಿಂದ ಬೆಂಗಳೂರಿನ ರೈಲು ನಿಲ್ದಾಣಕ್ಕೆ ಶುಕ್ರವಾರ 90 ಬಾಕ್ಸ್ನಲ್ಲಿ ಅಂದಾಜು 4,500 ಕೆಜಿ ಮಾಂಸ ತರಲಾಗಿತ್ತು. ಈ ವೇಳೆ, ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಪುನೀತ್ ಕೆರೆಹಳ್ಳಿ ನೇತೃತ್ವದ ಕಾರ್ಯಕರ್ತರು ದಾಳಿ ನಡೆಸಿದ್ದರು. ಬಾಕ್ಸ್ ಬಿಚ್ಚಿ ಉದ್ದದ ಬಾಲ ಕಂಡು ಕುರಿ ಮಾಂಸದೊಂದಿಗೆ ಬೇರೆ ಪ್ರಾಣಿಯ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
ಈ ಸಂಬಂಧ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದರು. ಅಲ್ಲದೇ, ಆಹಾರ ಇಲಾಖೆ ಅಧಿಕಾರಿಗಳನ್ನ ಭೇಟಿ, ನೀಡಿ ತಪಾಸಣೆ ನಡೆಸಿದ್ದರು. ಇದೇ ವೇಳೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿ ಅವರನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದರು.