ಸ್ಯಾಂಡಲ್ ವುಡ್ ಸ್ಟಾರ್ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಶಿವರಾತ್ರಿ ಹಬ್ಬದ ದಿನವೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಅಂತ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಮಿಲನಾ ನಾಗರಾಜ್ ಸದ್ಯ ಡಾರ್ಲಿಂಗ್ ಕೃಷ್ಣ ಜೊತೆ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ. ಅವುಗಳನ್ನು ನಟಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ತಮ್ಮ ಬೇಬಿ ಮೂನ್ ಎಂಜಾಯ್ ಮಾಡಲು ವಿದೇಶಕ್ಕೆ ಹೋಗಿದ್ದರು. ಬಾಲಿಯಲ್ಲಿ ಸಖತ್ ಎಂಜಾಯ್ ಮಾಡಿರೋ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು.
ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಪರಸ್ಪರ ಪ್ರೀತಿಸಿ ಮದುವೆ ಆದರು. ತೆರೆಮೇಲೆ ಒಂದಾಗದ ಇವರು ನಿಜ ಜೀವನದಲ್ಲಿ ಒಟ್ಟಿಗೆ ಸೇರಿದ್ದು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈಗ ಮಿಲನಾ ತಾಯಿ ಆಗುತ್ತಿದ್ದಾರೆ.
ಮಿಲನಾ ಅವರು ಸೆಪ್ಟೆಂಬರ್ನಲ್ಲಿ ಮಗುವಿಗೆ ಜನ್ಮನೀಡಲಿದ್ದಾರೆ. ಆ ದಿನಕ್ಕಾಗಿ ಅವರ ಕುಟುಂಬ ಹಾಗೂ ಫ್ಯಾನ್ಸ್ ಕಾದಿದ್ದಾರೆ. ಇದಕ್ಕೂ ಮೊದಲು ವಿವಿಧ ಫೋಟೋಗಳನ್ನು ಮಿಲನಾ ಅವರು ಹಂಚಿಕೊಳ್ಳುತ್ತಾ ಇದ್ದಾರೆ.
ಈಗ ತುಂಬು ಗರ್ಭಿಣಿ ಆಗಿ ಮಿಲನಾ ನಾಗರಾಜ್ ಅವರು ಫೋಟೋಶೂಟ್ ಮಾಡಿಸಿದ್ದಾರೆ. ಪತಿಯ ಜೊತೆ ಅವರು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.