ಪ್ರೀತಿಗಾಗಿ ದೇಶವನ್ನೇ ತೊರೆದು ಬಂದ ಸಾಕಷ್ಟು ಘಟನೆಗಳು ಕಳೆದ ಕೆಲ ವರ್ಷಗಳಿಂದ ನಡೆಯುತ್ತಲೆ ಇದೆ. ಇತ್ತೀಚೆಗೆ ಪಾಕಿಸ್ತಾನಿ ಮಹಿಳೆಯೊಬ್ಬರು ಪ್ರೇಮಿಗಾಗಿ ಪತಿಯನ್ನು ತೊರೆದು ಭಾರತಕ್ಕೆ ಬಂದಿದ್ದರು. ಇದೀಗ ಅಂಥದ್ದೇ ಘಟನೆಯೊಂದು ನಡೆದಿದೆ. ಪ್ರೇಮಿಗಳ ಪ್ರೀತಿಗೆ ಭಾರತ ಮತ್ತು ಪಾಕಿಸ್ತಾನ ಸಾಕ್ಷಿಯಾಗಿದೆ.
ಸೀಮಾ ಹೈದರ್ ಬಳಿಕ ಮಹ್ವಿಶ ಎಂಬ ಮಹಿಳೆಯೊಬ್ಬಳು ಪಾಕಿಸ್ತಾನದ ಗಡಿಯನ್ನು ದಾಟಿಕೊಂಡು ರಾಜಸ್ಥಾನದ ಚುರು ಜಿಲ್ಲೆಯ ಪಿತಿಸರ್ ಎಂಬ ಗ್ರಾಮಕ್ಕೆ ಬಂದಿದ್ದಾಳೆ. ಮೂಲಗಳ ಪ್ರಕಾರ ಚುರುವಿನ ರತನ್ನಗರ ಠಾಣೆಯ ವ್ಯಾಪ್ತಿಗೆ ಬರುವ ಪಿತಿಸಿರ್ನಲ್ಲಿ ವಾಸವಿರುವ ರೆಹ್ಮಾನ್ ಕುವೈತ್ನಲ್ಲಿ ಟ್ರಾನ್ಸ್ಫೋರ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಅಣ್ಣ ತಮ್ಮಂದಿರಲ್ಲಿ ರೆಹಮಾನ್ ದೊಡ್ಡವನು. ಚಿಕ್ಕವನಾದ ರಹೀಂ ಊರಿನಲ್ಲಿಯೇ ಇದ್ದುಕೊಂಡು ಹೊಲ ಗದ್ದೆಯನ್ನು ನೋಡಿಕೊಂಡು ಇದ್ದ. ಅದರ ಜೊತೆಗೆ ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡು ಚಿಕ್ಕದಾಗಿ ವ್ಯಾಪಾರವನ್ನು ಮಾಡುತ್ತಿದ್ದ. ಇವರ ತಂದೆ ಅಲಿ ಶೋರ್ ಅನ್ನೋರು ಹೊಲ ಗದ್ದೆಯ ಜೊತೆಗೆ ಪಶುಪಾಲನೆಯನ್ನು ಮಾಡಿಕೊಂಡು ಇದ್ದಾರೆ
ರೆಹಮಾನ್ಗೆ ಆಗಲೇ ಒಂದು ಮದುವೆಯಾಗಿತ್ತು. ಅವನ ಹಾಗೂ ಅವನ ಪತ್ನಿಯ ನಡುವೆ ಸಂಬಂಧಗಳು ಚೆನ್ನಾಗಿ ಇರಲಿಲ್ಲ. ಕುವೈತ್ನಿಂದ ಬಂದಾಗಲೆಲ್ಲಾ ಆತ ಮನೆಯಲ್ಲಿರುವುದಕ್ಕಿಂತ ಹೆಚ್ಚು ಆಚೆಯೇ ಇರುತ್ತಾನೆ ಎಂದು ಆಕೆ ಜಗಳ ತೆಗೆಯುತ್ತಿದ್ದಳು. ಕೊನೆಗೆ ಇಬ್ಬರು ಬೇರೆಯಾದರು. ಅದಾಗಲೇ ರೆಹಮಾನ್ ಹಾಗೂ ಮಹವಿಶ ಜೊತೆ ಮಾತುಕತೆಗಳು ಆರಂಭವಾಗಿದ್ದವು. ಹಜ್ ಯಾತ್ರೆಯಲ್ಲಿ ಮೊದಲ ಬಾರಿ ರೆಹಮಾನ್ ಮಹ್ವಿಶಳನ್ನ ನೋಡಿದ್ದ. ಅಂದಿನಿಂದ ಇಬ್ಬರ ನಡುವೆ ಪ್ರೀತಿಯು ಚಿಗುರೊಡೆದಿತ್ತು. ರೆಹಮಾನ್ನನ್ನು ಹುಡುಕಿಕೊಂಡು ಮಹ್ವಿಶ ಅವನಿರುವ ಊರಿಗೆ ಬಂದಿದ್ದಾಳೆ.
ಮಹ್ವಿಶಾಳ ಸುದ್ದಿ ರೆಹಮಾನ್ ಮೊದಲ ಪತ್ನಿ ಫರಿದಾಳ ಕಿವಿಗೆ ಬಿತ್ತೋ ಆಕೆ ನೇರವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಗಂಡನ ವಿರುದ್ಧ ಹಾಗೂ ಮಹ್ವಿಶ ವಿರುದ್ಧ ದೂರು ದಾಖಲಿಸಿದ್ದಾಳೆ. ಅವಳು ಪ್ರೀತಿಯ ಹೆಸರಿನಲ್ಲಿ ಬಂದು ಇಲ್ಲಿ ಪಾಕಿಸ್ತಾನದ ಪರವಾಗಿ ಗೂಢಚಾರಿಕೆ ಮಾಡುವ ಅಪಾಯವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.