ಮಂಡ್ಯ: ಸಂಪೂರ್ಣ ಭರ್ತಿಯಾಗಿರುವ ಕನ್ನಂಬಾಡಿ ಅಣೆಕಟ್ಟಿಗೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭಾಗಿನ ಅರ್ಪಿಸಲಿದ್ದಾರೆ. ಎರಡು ವರ್ಷಗಳ ನಂತರ ಹಳೇ ಮೈಸೂರು ಭಾಗದ ಜೀವನದಿ ಕಾವೇರಿ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೆಆರ್ಎಸ್ ಜಲಾಶಯದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಲಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಮೂರನೇ ಬಾರಿಗೆ ಕೆಆರ್ಎಸ್ಗೆ ಬಾಗಿನ ಅರ್ಪಿಸುತ್ತಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಬಾಗಿನ ಅರ್ಪಣೆ ಮಾಡಲಿದ್ದು, KRS ಡ್ಯಾಂ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಹಸಿರು ತೋರಣ, ವಿವಿಧ ಹೂಗಳಿಂದ ಸಿಂಗಾರಗೊಂಡಿದ್ದು, ಕನ್ನಡ ಬಾವುಟಗಳು ಡ್ಯಾಂ ಮೇಲೆ ರಾರಾಜಿಸುತ್ತಿವೆ. ಕಾವೇರಿ ಪ್ರತಿಮೆಗೆ ವಿವಿಧ ಪುಷ್ಪ, ಹಸಿರು ಹಾಗೂ ಕಪ್ಪು ಬಣ್ಣದ ಬಳೆಗಳಿಂದ ಅಲಂಕಾರ ಮಾಡಲಾಗಿದ್ದು, ರೆಡ್ ಕಾರ್ಪೆಟ್ ಹಾಕಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸ್ವಾಗತಕ್ಕೆ ತಯಾರಿ ಮಾಡಲಾಗಿದೆ. ಬೆಳಿಗ್ಗೆ 11:00ಕ್ಕೆ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ಬಾಗಿನ ಸಮರ್ಪಣೆ ಮಾಡಲಿದ್ದು,
ಮೊದಲ ಬಾರಿಗೆ ಸಿಎಂ ಆದಾಗ 2013 ಹಾಗೂ 2014 ರಲ್ಲಿ ಬಾಗಿನ ಅರ್ಪಿಸಿದ್ದರು. ಆನಂತರ ಬರಗಾಲ ಹಿನ್ನೆಲೆ ಜಲಾಶಯ ಭರ್ತಿಯಾಗಿರಲಿಲ್ಲ. ಎರಡನೇ ಅವಧಿಗೂ ಸಿಎಂ ಆದಗಲೂ ಅಂದರೆ ಕಳೆದ ವರ್ಷ ಕೂಡ ಕನ್ನಂಬಾಡಿ ಅಣೆಕಟ್ಟು ಭರ್ತಿಯಾಗಿರಲ್ಲ. ಇದೀಗ ಮತ್ತೆ ಸಿಎಂ ಆಗಿರುವಾಗಲೇ ಭರ್ತಿಯಾಗಿದೆ. ಹೀಗಾಗಿ ಜಿಲ್ಲಾಡಳಿತ ಎಲ್ಲ ಸಿದ್ದತೆ ಮಾಡಿಕೊಂಡಿದೆ.