ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ದರ್ಶನ್ ರನ್ನು ನೋಡಲು ಇತ್ತೀಚೆಗೆ ನಟ ವಿನೋದ್ ರಾಜ್ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ್ದರು. ಆ ಬೆನ್ನಲ್ಲೆ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ್ದ ನಟ ಒಂದು ಲಕ್ಷ ರೂಪಾಯಿ ಚೆಕ್ ನೀಡಿದ್ದರು. ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾದ ಹಿನ್ನೆಲೆ ರಾಜಿ ಸಂಧಾನಕ್ಕೆ ಹೋಗಿದ್ದಾರೆ ಎಂದು ಚರ್ಚೆ ಶುರುವಾಗಿತ್ತು. ಈ ಬಗ್ಗೆ ಮಾತನಾಡಿ ವಿನೋದ್ ರಾಜ್ ನಾನು ಯಾರ ಪರವಾಗಿ ರಾಜಿ ಸಂಧಾನಕ್ಕೆ ಹೋಗಿದ್ದಲ್ಲ ಎಂದು ಎಂದಿದ್ದಾರೆ.
ರೇಣುಕಾಸ್ವಾಮಿ ಕುಟುಂಬಸ್ಥರ ಭೇಟಿಯ ಕುರಿತು ವಿನೋದ್ ರಾಜ್ ಮಾತನಾಡಿ, ಕಳೆದ ವಾರ ದರ್ಶನ್ರನ್ನು ಕಾಣಲು ಕಾರಾಗೃಹಕ್ಕೆ ಭೇಟಿ ನೀಡಿದ್ದೆ ಅದಾದ ನಂತರ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾದೆ. ರಾಜಿ ಸಂಧಾನಕ್ಕೆ ಹೋಗಿದ್ದೀನಿ ಅಂತೆಲ್ಲಾ ಸುದ್ದಿಯಾಯಿತು. ಖಂಡಿತಾ ಇಲ್ಲ. ದರ್ಶನ್ ಒಬ್ಬ ಕಲಾವಿದರು ಎನ್ನುವ ಪ್ರೀತಿಯಿಂದ ನೋಡಿ ಭೇಟಿಯಾಗಿ ಬಂದಿದ್ದೇನೆ ಅಷ್ಟೇ ಎಂದರು.
ಆದರೆ ರೇಣುಕಾಸ್ವಾಮಿ ಪತ್ನಿ ಪ್ರೆಗ್ನೆಂಟ್ ಅನ್ನೋ ಕಾರಣಕ್ಕೆ ಹುಟ್ಟೋ ಮಗುವಿಗೆ ಏನಾದರೋ ಒಳ್ಳೆಯದು ಮಾಡೋಕೆ ಆಗುತ್ತಾ ಅನ್ನುವ ದೃಷ್ಟಿಯಿಂದ ಹೋಗಿ ಬಂದಿದ್ದೇನೆ ಅಷ್ಟೇ. ಅದಕ್ಕೆ ಕೈಲಾದ ಕಾಣಿಕೆ ಕೊಟ್ಟು ಬಂದೆ. ಅದು ಬಿಟ್ಟು ಯಾವುದೇ ರಾಜಿ ಸಂಧಾನ ಮಾಡಲು ನಾನು ಹೋಗಿರಲಿಲ್ಲ. ಅದು ನನಗೆ ಬೇಕಾಗೂ ಇಲ್ಲ ಎಂದು ವಿನೋದ್ ರಾಜ್ ಸ್ಪಷ್ಟ ಪಡಿಸಿದ್ದಾರೆ.
ಜು.26ರಂದು ರೇಣುಕಾಸ್ವಾಮಿ ಕುಟುಂಬಸ್ಥರನ್ನು ಭೇಟಿಯಾದ ವಿನೋದ್ ರಾಜ್ ತಾಯಿ ಲೀಲಾವತಿ ಹೆಸರಲ್ಲಿ 1 ಲಕ್ಷ ರೂ. ನೆರವು ನೀಡಿದ್ದರು.