ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಮೈತ್ರಿ ನಾಯಕರ ಬೃಹತ್ ಪಾದಯಾತ್ರೆ ಹಿನ್ನೆಲೆಯಲ್ಲಿ ಇಂದು ಬಿಜೆಪಿ ನಾಯಕರ ಪಾದಯಾತ್ರೆ ಪೂರ್ವಭಾವಿ ಸಭೆ ನಡೆಯಲಿದೆ.
ಬೆಂಗಳೂರಿನಿಂದ- ಮೈಸೂರಿನವರೆಗೆ 7 ದಿನಗಳ ಕಾಲ ಪಾದಯಾತ್ರೆ ನಡೆಸಲಿರುವ ಕಮಲ-ದಳ ನಾಯಕರು ಆಗಸ್ಟ್ 3 ರಿಂದ 10 ನೇ ತಾರೀಖಿನವರೆಗೆ ನಡೆಯಲಿರುವ ಪಾದಯಾತ್ರೆ ಭಾನುವಾರ ಪಾದಯಾತ್ರೆಯ ದಿನಾಂಕ ಫಿಕ್ಸ್ ಮಾಡಲು ಸಭೆ ಸೇರಿದ ಬಿಜೆಪಿ- ಜೆಡಿಎಸ್ ಪ್ರಮುಖರು ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದಿದ್ದ ಸಭೆ
ಇಂದು ಪಾದಯಾತ್ರೆಯ ರೂಪುರೇಷೆ ಸಿದ್ದಪಡಿಸಲು ಬಿಜೆಪಿಯಿಂದ ಪೂರ್ವಭಾವಿ ಸಭೆ ನಡೆಸಲಾಗಿದ್ದು ಬೆಳಗ್ಗೆ 11 ಗಂಟೆಗೆ ಅರಮನೆ ಮೈದಾನದಲ್ಲಿ ನಡೆಯಲಿರೋ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಜಂಟಿ ಸಭೆಯಾಗಿದ್ದು ಸಭೆಯಲ್ಲಿ ಹಿರಿಯ ನಾಯಕರೆಲ್ಲರೂ ಭಾಗವಹಿಸಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಸಭೆಯಲ್ಲಿ ಹಾಲಿ-ಮಾಜಿ ಸಂಸದರು, ಶಾಸಕರು, ಎಂಎಲ್ಸಿಗಳು ಹಾಗೂ ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು & ಪಕ್ಷದ ಪ್ರಮುಖ ಭಾಗಿಯಾಗಲಿದ್ದಾರೆ.
ಸಭೆಯಲ್ಲಿ ಚರ್ಚೆಯಾಗುವ ವಿಷಯಗಳು
* ಪಾದಯಾತ್ರೆಯ ಸಾಗುವ ರೂಟ್ನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ..
* ಪಕ್ಷದ ನಾಯಕರಿಗೆ ಪಾದಯಾತ್ರೆಯ ಜವಾಬ್ದಾರಿ ಹಂಚಿಕೆ ಮಾಡಲಿರೋ ರಾಜ್ಯಾಧ್ಯಕ್ಷ..
* ಪ್ರಮುಖವಾಗಿ ಮೈಸೂರು ಭಾಗಿದ ಶಾಸಕರು, ಸಂಸದರು & ಮುಖಂಡರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಸಾಧ್ಯತೆ..
* ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನ ಪಾದಯಾತ್ರೆಯಲ್ಲಿ ಒಗ್ಗೂಡಿಸುವುದು..
* ಆಹಾರ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಒದಗಿಸುವ ಜವಾಬ್ದಾರಿ ಹಂಚಿಕೆ..
* ಅದೇ ರೀತಿ ಜೆಡಿಎಸ್ ಜೊತೆ ಒಟ್ಟಾಗಿ ಪಾದಯಾತ್ರೆ ಮಾಡುವ ಬಗ್ಗೆ ಸ್ಥಳಿಯ ನಾಯಕರಿಗೆ ಸೂಚನೆ..
* ಯಾವ ಯಾವ ಮಾರ್ಗದಲ್ಲಿ ಪಾದಯಾತ್ರೆ ಸಾಗುತ್ತೆ ಎಂದು ಮುಖಂಡರಿಗೆ ತಿಳಿಸಲಿರೋ ವಿಜಯೇಂದ್ರ & ಆರ್. ಅಶೋಕ್..