ಬೆಂಗಳೂರು:- 14 ಗಂಟೆಗಳ ಕೆಲಸ ಮಾಡಬೇಕೆನ್ನುವ ರಾಜ್ಯ ಸರ್ಕಾರದ ವಿರುದ್ಧ IT ಉದ್ಯೋಗಿಗಳು ಸಿಡಿದೆದ್ದಿದ್ದು, ಆಗಸ್ಟ್ 3 ಪ್ರೊಟೆಸ್ಟ್ ನಡೆಸಲು ನಿರ್ಧರಿಸಿದ್ದಾರೆ
14 ಗಂಟೆ ಕೆಲಸದ ಅವಧಿ ವಿಸ್ತರಿಸುವ ಪ್ರಸ್ತಾವಕ್ಕೆ ಸಿಡಿದೆದ್ದಿದ್ದ ಸಾಫ್ಟ್ವೇರ್ ಉದ್ಯೋಗಿಗಳು ಮೊನ್ನೆ ಮಡಿವಾಳ, ಬಿಟಿಎಂ ಲೇಔಟ್ನಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರ ನಿರ್ಧಾರ ವಾಪಸ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.
ನಂತರ ಈ ಕುರಿತು ಇಮೇಲ್ ಚಳುವಳಿ ಆರಂಭಿಸಿದ್ದರು.
ಈ ಬಗ್ಗೆ ಕರ್ನಾಟಕ ರಾಜ್ಯ ಐಟಿ ಮತ್ತು/ ಐಟಿಇಎಸ್ ಎಂಪ್ಲಾಯೀಸ್ ಯೂನಿಯನ್ ಅಭಿಯಾನ ಆರಂಭಿಸಿದ್ದು, ಎಂದು ಇಮೇಲ್ ಮೂಲಕ ಸಂದೇಶ ಕಳುಹಿಸಲು ಆರಂಭಿಸಿದ್ದಾರೆ
ಕೆಲಸದ ಅವಧಿಯ ಹೆಚ್ಚಳ ಮೂಲತಃ ಸರ್ಕಾರದ ಚಿಂತನೆಯಲ್ಲ. ಆದರೆ ಐಟಿ-ಬಿಟಿ ಉದ್ಯೋಗಿಗಳಿಗೆ 14 ಗಂಟೆ ಕೆಲಸದ ಸಮಯ ನಿಗದಿಗೆ ಸರ್ಕಾರದ ಮೇಲೆ ಕೆಲವು ಉದ್ಯಮಿಗಳು ತೀವ್ರ ಒತ್ತಡ ಹೇರುತ್ತಿದ್ದಾರೆ. ಕಾರ್ಮಿಕ ಸಚಿವರ ವಿರೋಧದ ನಡುವೆಯೂ ಮುಖ್ಯಕಾರ್ಯದರ್ಶಿ ಮೂಲಕ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ಯಮಿಗಳು ಕಸರತ್ತು ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯಗೂ ಉದ್ಯಮಿಗಳು ಒತ್ತಡ ಹೇರುತ್ತಿದ್ದಾರೆ ಎಂದು ಐಟಿ ಉದ್ಯೋಗಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ಆಗಸ್ಟ್ 3ರಂದು ರಾಜಧಾನಿಯ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಮುಷ್ಕರ ನಡೆಯಲಿದೆ. ಕೆಲಸದ ಅವಧಿಯನ್ನು 14 ಗಂಟೆಗೆ ವಿಸ್ತರಣೆ ಮಾಡಲು ಕರ್ನಾಟಕ ಸಚಿವ ಸಂಪುಟ ಚಿಂತಿಸಿತ್ತು. ಈ ಬಗ್ಗೆ ಐಟಿ ಕಂಪನಿಗಳು ಮಗುಂ ಆಗಿದ್ದವು. ಇದು ಐಟಿ ಉದ್ಯೋಗಿಗಳನ್ನು ಕೆರಳಿಸಿದೆ.
ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಐಟಿ ಕಂಪನಿಗಳ ವಿರುದ್ಧ ಪ್ರತಿಭಟನೆಗೆ ಇಳಿಯಲು ಐಟಿ ಉದ್ಯೋಗಿಗಳು ನಿರ್ಧರಿಸಿದ್ದಾರೆ. ಐಟಿ ಎಂಪ್ಲಾಯೀಸ್ ಅಸೋಸಿಯೇಷನ್ ಈ ಬಗ್ಗೆ ಹೋರಾಡಲು ತೀರ್ಮಾನಿಸಿದ್ದು, ಸಾವಿರಾರು ಐಟಿ ಉದ್ಯೋಗಿಗಳು ಸೇರಿ ಆಗಸ್ಟ್ 3ರಂದು ಪ್ರತಿಭಟಿಸಲು ಮುಂದಾಗಿದ್ದಾರೆ.