ಬೆಂಗಳೂರು: ಮಂಡ್ಯದ ಒಕ್ಕಲಿಗ ಕಲಿಗಳು ಎಂದು ಬಿಂಬಿಸಲಾಗುತ್ತಿರುವ `ಉರಿಗೌಡ, ನಂಜೇಗೌಡ’ ಹೆಸರಿನಲ್ಲಿ ಸಿನಿಮಾವೊಂದು ಮೂಡಿ ಬರುಲಿದ್ದು, ಮೇ 18ರಂದು ಚಿತ್ರೀಕರಣಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ವಿ.ಮುನಿರತ್ನ ಚಿತ್ರಕ್ಕೆ `ಉರಿಗೌಡ-ನಂಜೇಗೌಡ’ (1750-1799 ಐತಿಹಾಸಿಕ ಘಟನೆಗಳನ್ನು ಆಧರಿಸಿದ ಸತ್ಯಕಥೆ) ಎಂಬ ಶೀರ್ಷಿಕೆಯನ್ನಿಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿತ್ರದ ಪೋಸ್ಟರ್ ಸಹ ಹಂಚಿಕೊಂಡಿದ್ದಾರೆ.
`ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ‘ಉರೀಗೌಡ ನಂಜೇಗೌಡ’ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
ಕುರುಕ್ಷೇತ್ರ ಸೇರಿದಂತೆ ಹಲವು ಭಾರೀ ಬಜೆಟ್ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಮುನಿರತ್ನ, ಈ ಬಾರಿ ವಿವಾದಿತ ವ್ಯಕ್ತಿಗಳ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯ ಯಾವ ರೀತಿ ಈ ಚಿತ್ರ ಮೂಡಿಬರಲಿದೆ ಎಂಬುದು ಕುತೂಹಲ ಚಿತ್ರ ಆರಂಭಕ್ಕೂ ಮುನ್ನವೇ ಶುರುವಾಗಿದೆ.