ಪಿಸಿಓಡಿಯಿಂದ ಮಹಿಳೆಯರು ಹೆಚ್ಚು ಬಾಧಿತರಾಗುತ್ತಾರೆ. ಕೆಲವು ಮಹಿಳೆಯರು ಇದನ್ನು ಸುಲಭವಾಗಿ ತೆಗೆದುಕೊಂಡರೂ, ಪರಿಣಾಮಗಳು ಹಲವು ಇರುತ್ತದೆ. ಅದನ್ನು ಕಡಿಮೆ ಮಾಡುವ ವಿಧಾನಗಳನ್ನು ನೀವು ಮನೆಯಲ್ಲಿಯೇ ಕಂಡುಕೊಳ್ಳಬಹುದು.
ವ್ಯಾಯಾಮ: ಮಹಿಳೆಯರು ವ್ಯಾಯಾಮದ ಮೂಲಕ ಪಿಸಿಓಡಿಯನ್ನು ನಿಯಂತ್ರಿಸಬಹುದು. ನಿಯಮಿತ ವ್ಯಾಯಾಮ ಪಿಸಿಓಡಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳು ಮಹಿಳೆಯರ ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ.
ಒತ್ತಡ: ಪಿಸಿಒಡಿ ಸಂಭವಿಸುವಲ್ಲಿ ಒತ್ತಡವು ಪ್ರಮುಖ ಪಾತ್ರ ವಹಿಸುತ್ತದೆ. ಯೋಗ ಮಾಡುವುದು, ಪ್ರಯಾಣ ಮಾಡುವುದು ಮತ್ತು ನಾವು ಇಷ್ಟಪಡುವ ಕೆಲಸಗಳನ್ನು ಮಾಡುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಒತ್ತಡವನ್ನು ಕಡಿಮೆ ಮಾಡುವುದು ಹೇಗೆ? ತೂಕ ಹೆಚ್ಚಾಗುವ ಸಾಧ್ಯತೆಯಿರುವ ಅನೇಕ ಮಂದಿ ಒತ್ತಡದಿಂದಾಗಿ ಅತಿಯಾಗಿ ತಿನ್ನುತ್ತಾರೆ. ಆದರೆ ಧ್ಯಾನ ಹೆಚ್ಚು ಆಹಾರ ಸೇವನೆಯನ್ನು ತಡೆಯಲು ಸಹಾಯ ಮಾಡುತ್ತದೆ.
ತೂಕ: ತೂಕವನ್ನು ಕಳೆದುಕೊಳ್ಳುವುದು ಮಹಿಳೆಯರಲ್ಲಿ ಪಿಸಿಓಡಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವ್ಯಾಯಾಮ, ವಾಕಿಂಗ್ ಮತ್ತು ಯೋಗದ ಮೂಲಕ ತೂಕವನ್ನು ಕಡಿಮೆ ಮಾಡಬಹುದು.
ಇದಲ್ಲದೇ ಬೊಜ್ಜು ನಮ್ಮಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಬೇಗನೇ ತೂಕ ಇಳಿಸಿಕೊಳ್ಳುವುದು ಉತ್ತಮ. ಅದರಲ್ಲೂ ಪ್ರಿಡಯಾಬಿಟಿಸ್ ಅಥವಾ ಪಿಸಿಒಡಿಯಿಂದ ಅಧಿಕ ತೂಕವು ಪ್ರಮುಖ ಸಮಸ್ಯೆಯಾಗುತ್ತದೆ. ಈ ಎರಡು ಕಾಯಿಲೆಗಳಿಂದ ಬಳಲುತ್ತಿರುವವರು ಅನಗತ್ಯ ಬೊಜ್ಜನ್ನು ಕರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಈ ಎರಡೂ ಕಾಯಿಲೆಗಳು ಹಾರ್ಮೋನ್ ಸಮತೋಲನ ಮತ್ತು ಇನ್ಸುಲಿನ್ ಪ್ರತಿರೋಧವನ್ನು ಅಡ್ಡಿಪಡಿಸುತ್ತವೆ.
ಸಮತೋಲಿತ ಆಹಾರ: ಸಮತೋಲಿತ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಋತುಚಕ್ರವನ್ನು ನಿಯಂತ್ರಿಸಬಹುದು. ಎಲ್ಲಾ ಪೋಷಕಾಂಶಗಳನ್ನು ಸಾಕಷ್ಟು ಪ್ರಮಾಣದಲ್ಲಿ ಪ್ರತಿದಿನ ತೆಗೆದುಕೊಳ್ಳಬೇಕು
ಕಾರ್ಬೋಹೈಡ್ರೇಟ್ಗಳು: ಕಾರ್ಬೋಹೈಡ್ರೇಟ್ಗಳ ದೈನಂದಿನ ಸೇವನೆಯನ್ನು ಕಡಿಮೆ ಮಾಡಬೇಕು. ಕಾರ್ಬೋಹೈಡ್ರೇಟ್ ಗಳು ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಬಹುದು.
ದಾಲ್ಚಿನ್ನಿ: ದಾಲ್ಚಿನ್ನಿ ಆಹಾರದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮಹಿಳೆಯರ ಆರೋಗ್ಯವನ್ನು ಸುಧಾರಿಸುತ್ತದೆ.
ದಾಲ್ಚಿನ್ನಿಯಲ್ಲಿರುವ ಪೋಷಕಾಂಶಗಳು: ಸಮಯಂ ವರದಿ ಪ್ರಕಾರ, ದಾಲ್ಚಿನ್ನಿ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ಮೆಗ್ನೀಸಿಯಮ್, ರಂಜಕ, ತಾಮ್ರ, ಸತು, ವಿಟಮಿನ್ಗಳು, ನಿಯಾಸಿನ್, ಥಿಯಾಜಿನ್ನಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಹೀಗಾಗಿ ತೂಕ ಇಳಿಕೆಗೆ ದಾಲ್ಚಿನ್ನಿ ಬಹಳ ಸಹಾಯಕವಾಗಿದೆ. ದಾಲ್ಚಿನ್ನಿಯನ್ನು ಆಹಾರದಲ್ಲಿ ಸೇರಿಸಿದ್ರೆ ದೇಹದ ಚಯಾಪಚಯ ಹೆಚ್ಚಿಸುತ್ತದೆ. ಇದು ತೂಕ ನಷ್ಟದ ಪ್ರಕ್ರಿಯೆ ವೇಗವಾಗಿಸುತ್ತದೆ. ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ
ಉತ್ತಮ ನಿದ್ರೆ: ಮಾನವನ ಆರೋಗ್ಯಕರ ಜೀವನಕ್ಕೆ ನಿದ್ರೆ ಅತ್ಯಗತ್ಯ. ಮಹಿಳೆಯರಿಗೆ, ಸರಿಯಾದ ಸಮಯಕ್ಕೆ ಮಲಗುವುದು ಮತ್ತು ಸರಿಯಾದ ಪ್ರಮಾಣದ ನಿದ್ದೆ ಮಾಡುವುದರಿಂದ ಪಿಸಿಓಡಿ ಸುಧಾರಿಸಬಹುದು
ನೀವು ನಿದ್ರೆ ಸಮಸ್ಯೆಯಿಂದ ಬಳಲುತ್ತಿದ್ದರೆ ಏರೋಬಿಕ್ ವ್ಯಾಯಾಮ ಮಾಡಬಹುದು. ಏರೋಬಿಕ್ ವ್ಯಾಯಾಮವು ಭಾಗವಹಿಸುವವರಲ್ಲಿ ನಿದ್ರೆಯ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಆಳವಾದ ನಿದ್ರೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಅನೇಕ ಸಂಶೋಧನೆಗಳಲ್ಲಿ ಕಂಡುಬಂದಿದೆ. ಏರೋಬಿಕ್ ವ್ಯಾಯಾಮದ ಅತ್ಯುತ್ತಮ ಪ್ರಯೋಜನಗಳಲ್ಲಿ ಇದು ಒಂದಾಗಿದೆ.