ಬೆಂಗಳೂರು: ವಾಲ್ಮೀಕಿ, ಮುಡಾ ಹಗರಣಗಳಿಂದ ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಎದುರಾದಂತೆ ಕಾಣ್ತಿದೆ. ಹೈಕಮಾಂಡ್ ಬುಲಾವ್ ಹಿನ್ನೆಲೆ ಇಂದು ಸಿಎಂ,ಡಿಸಿಎಂ ದೆಹಲಿಗೆ ತೆರಳ್ತಿದ್ದಾರೆ.ನಾಯಕತ್ವ ಬದಲಾವಣೆಯ ಸದ್ದು ಸೈಲೆಂಟಾಗಿ ಶುರುವಾಗಿದೆ.ಹೀಗಾಗಿ, ಸಿಎಂ ಆಪ್ತರು ಆಲರ್ಟ್ ಆಗಿದ್ದಾರೆ.ಅಹಿಂದ ಹೋರಾಟ ರೂಪಿಸುವ ಮೂಲಕ ಸಿಎಂ ಬೆಂಬಲಕ್ಕೆನಿಂತಿದ್ದಾರೆ.
ಯೆಸ್,ವಾಲ್ಮೀಕಿ ಹಾಗೂ ಮುಡಾ ಹಗರಣಗಳ ಸುಳಿಯಲ್ಲಿ ಸರ್ಕಾರ ಹೊರಳಾಡ್ತಿದೆ.ರಾಜ್ಯಸಭೆ ಹಾಗೂ ಲೋಕಸಭೆ ಸದನದಲ್ಲಿ ವಿಷಯ ಪ್ರಸ್ತಾಪದಿಂದಾಗಿ ಹೈಕಮಾಂಡ್ ಗೂ ಮುಜುಗರ ಎದುರಾಗಿದೆ.ಇದ್ರಿಂದ ಸರ್ಕಾರ ಹಾಗೂ ಪಕ್ಷಕ್ಕಾಗಿರುವ ಡ್ಯಾಮೇಜ್ ಸರಿಪಡಿಸೋಕೆ ವರಿಷ್ಟರು ಮುಂದಾಗಿದ್ದಾರೆ.
ರಾಜ್ಯ ನಾಯಕರಿಂದ ಮಾಹಿತಿ ಪಡೆಯಲು ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.ಹೀಗಾಗಿ ಇಂದು ಸಿಎಂ,ಡಿಸಿಎಂ ಕೆಲ ಹಿರಿಯ ಸಚಿವರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಹೈಕಮಾಂಡ್ ಕರೆದಿರುವ ಸಭೆಯಲ್ಲಿಭಾಗವಹಿಸಲಿದ್ದಾರೆ.. ಆನಂತರ ಖರ್ಗೆ,ರಾಹುಲ್,ಸೋನಿಯಾ ಭೇಟಿ ಮಾಡಲಿದ್ದು ಎರಡು ಹಗರಣಗಳಿಗೆ ಸಂಬಂಧಿಸಿದಂತೆ ದಾಖಲೆ ಸಮೇತ ವಿವರಣೆ ನೀಡಲಿದ್ದಾರೆ.