ನವದೆಹಲಿ: ಹಳೇ ಮೈಸೂರು ಭಾಗ ಮತ್ತು ಬೆಂಗಳೂರಿಗೆ ಕಾವೇರಿಯೇ ಆಧಾರ, ಕುಡಿಯುವ ನೀರು ಕೊಡುವ ಭರವಸೆಯ ಮೇಲೆ ಜನರು ಎನ್ಡಿಎಗೆ ಮತ ಹಾಕಿದ್ದಾರೆ.
ಹಣಕಾಸು ಸಚಿವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಇಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲ. ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪ್ರಶ್ನಿಸಿದ್ದಾರೆ.
ಬಜೆಟ್ ಮೇಲೆ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ಬೆಳೆಯುತ್ತಿರುವ ನಗರ ಅದಕ್ಕೆ ಕುಡಿಯುವ ನೀರಿನ ಅಗತ್ಯವಿದೆ. ಜನರು ಕುಡಿಯುವ ನೀರಿಲ್ಲದೇ ಸಂಕಷ್ಟದಲ್ಲಿದ್ದಾರೆ, ನೀರಿಲ್ಲದೇ ತತ್ತರಿದ್ದ ವೇಳೆ ಒಂದು ಟಿಎಂಸಿ ನೀರು ಹರಿಸಲು (ಕಾವೇರಿ ನೀರು ನಿಯಂತ್ರಣ ಸಮಿತಿ) ಹೇಳಿತ್ತು, ಮಳೆಯಿಂದ ಈಗ ಎಲ್ಲವೂ ಸುಗಮವಾಗಿದೆ. ಮಳೆ ಬರದಿದ್ದರೇ ನಮ್ಮ ಪರಿಸ್ಥಿತಿ ಏನು ಹೇಳಿ? ಎಂದು ಪ್ರಶ್ನಿಸಿದರು.
ನಾನು ಸಾಕಷ್ಟು ನೀರಿನ ವ್ಯಾಜ್ಯ ಬಗೆಹರಿಸಿದ್ದೇನೆ, ಮುಂದಿನ ಬಜೆಟ್ ಬಗ್ಗೆ ಮಾತನಾಡಲು ಇರ್ತಿನೊ ಇಲ್ವೊ ಗೊತ್ತಿಲ್ಲ. ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಜನರು ಎನ್ಡಿಎ ಬೆಂಬಲಿಸಿದ್ದಾರೆ. ಹಳೇ ಮೈಸೂರು ಭಾಗ ಮತ್ತು ಬೆಂಗಳೂರಿಗೆ ಕಾವೇರಿಯೇ ಆಧಾರ, ಕುಡಿಯುವ ನೀರು ಕೊಡುವ ಭರವಸೆ ಮೇಲೆ ಜನರು ಎನ್ಡಿಎಗೆ ಮತ ಹಾಕಿದ್ದಾರೆ. ಹಣಕಾಸು ಸಚಿವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಇಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲ. ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ಮನವಿ ಮಾಡಿದರು.
ಬಜೆಟ್ ಬಗ್ಗೆ ಮಾತನಾಡಿದ ಅವರು, ನಾನು ಹೃದಯಪೂರ್ವಕವಾಗಿ ಬಜೆಟ್ ಬೆಂಬಲಿಸುತ್ತೇನೆ. ನಾನು 1991 ರಲ್ಲಿ ಸಂಸತ್ಗೆ ಬಂದೆ ಈಗ ನನಗೆ 92 ವರ್ಷ ಮುಂದಿನ ಬಜೆಟ್ ಬಗ್ಗೆ ಮಾತಮಾಡ್ತಿನೋ ಇಲ್ಲವೊ ಗೊತ್ತಿಲ್ಲ, ನಾನು ಹಿಂದೆ ಮೋದಿ ಅವರನ್ನ ವಿರೋಧಿಸಿದ್ದೆ. ಆದರೆ ಈಗ ನಾನು ಎನ್ಡಿಎ ಭಾಗವಾಗಿದ್ದೇನೆ ಅದಕ್ಕಾಗಿ ಜೆ.ಪಿ ನಡ್ಡಾ ಅವರಿಗೆ ಧನ್ಯವಾದಗಳು ಎಂದರು.