ಮಳೆಗಾಲ ಎನ್ನುವುದು ಮಧುಮೇಹಿಗಳಿಗೆ ಸವಾಲಾಗಿದೆ. ಶುಷ್ಕ ವಾತಾವರಣ, ತಾಪಮಾನ ಮತ್ತು ನೀರು ನಿಲ್ಲುವ ಪರಿಸರದಲ್ಲಿ ಸೋಂಕುಗಳು ಹರಡುವಂತಹ ಸಾಧ್ಯತೆಯು ಹೆಚ್ಚಾಗಿ ಇರುವುದು. ಮಳೆಗಾಲದಲ್ಲಿ ಮಧುಮೇಹಿಗಳು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
ನಿಯಮಿತವಾಗಿ ರಕ್ತದಲ್ಲಿ ಸಕ್ಕರೆ ಮಟ್ಟ ಪರೀಕ್ಷೆ
ವಾತಾವರಣದಲ್ಲಿ ಬದಲಾವಣೆ ಆಗುವ ಕಾರಣದಿಂದ ಇನ್ಸುಲಿನ್ ಸೂಕ್ಷ್ಮತೆ ಮೇಲೆ ಪರಿಣಾಮವಾಗಬಹುದು. ಇದರಿಂದ ಅನಿರೀಕ್ಷಿತವಾಗಿ ರಕ್ತದಲ್ಲಿನ ಗ್ಲುಕೋಸ್ ಮಟ್ಟದಲ್ಲಿ ಏರುಪೇರು ಆಗಬಹುದು.
ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಗಮನಿಸುತ್ತಾ ಇರಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರುಪೇರು ಆಗಿದ್ದರೆ, ಆಗ ಇದರಿಂದ ಔಷಧಿ, ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ
ಹೈಡ್ರೇಟ್ ಆಗಿರುವುದು:-
ಮಳೆಗಾಲದಲ್ಲಿ ಬಾಯಾರಿಕೆ ಆಗುವುದು ತುಂಬಾ ಕಡಿಮೆ. ಆದರೆ ಮಧುಮೇಹಿಗಳು ದೇಹವನ್ನು ಹೈಡ್ರೇಟ್ ಆಗಿಡುವುದು ಅಗತ್ಯ.
ಶುಷ್ಕತೆಯಿಂದಾಗಿ ದೇಹದಲ್ಲಿ ನಿರ್ಜಲೀಕರಣವು ಉಂಟಾಗಬಹುದು ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಬಹುದು. ಇದಕ್ಕೆ ದಿನವಿಡಿ ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯಿರಿ.
ಸಕ್ಕರೆ ಅಥವಾ ಕಾರ್ಬೋನೇಟೆಡ್ ಪಾನೀಯಗಳನ್ನು ಕಡೆಗಣಿಸಿ. ನೀರು, ಗಿಡಮೂಲಿಕೆ ಚಾ ಅಥವಾ ತಾಜಾ ಹಣ್ಣಿನ ಜ್ಯೂಸ್ ಗಳನ್ನು ಸೇವನೆ ಮಾಡಬೇಡಿ
ಸಮತೋಲಿತ ಆಹಾರ:
ಕರಿದ ಆಹಾರಗಳು ಮತ್ತು ಸಕ್ಕರೆಯುಕ್ತ ಪೇಯಗಳನ್ನು ಸೇವನೆ ಮಾಡಲು ಮಳೆಗಾಲದಲ್ಲಿ ಮನಸ್ಸಾಗುವುದು. ಆದರೆ ಮಧುಮೇಹಿಗಳು ಸಮತೋಲಿತ ಆಹಾರ ಕ್ರಮವನ್ನು ಪಾಲಿಸಬೇಕು.
ತಾಜಾ ತರಕಾರಿಗಳು, ಇಡೀ ಧಾನ್ಯಗಳು, ಲೀನ್ ಪ್ರೋಟೀನ್ ಮತ್ತು ಆರೋಗ್ಯಕಾರಿ ಕೊಬ್ಬು ಸೇವಿಸಬೇಕು. ಋತುಚಕ್ರಕ್ಕೆ ಅನುಗುಣವಾಗಿ, ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಹಣ್ಣುಗಳನ್ನು ಸೇವನೆ ಮಾಡಿದರೆ, ಆಗ ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡಬಹುದು.
ಬೀದಿಬದಿಯ ಆಹಾರ ಸೇವನೆ ಕಡಿಮೆ ಮಾಡಿ ಮತ್ತು ಮನೆಯಲ್ಲೇ ತಯಾರಿಸಿಕೊಂಡ ಆಹಾರ ಸೇವನೆ ಮಾಡಿದರೆ ಆಹಾರದಿಂದ ಬರುವ ಅನಾರೋಗ್ಯ ದೂರ ಮಾಡಬಹುದು.
ಸೋಂಕು ದೂರವಿಡಿ ಮತ್ತು ಪಾದಗಳ ರಕ್ಷಣೆ ಮಾಡಿ:
ಮಳೆಗಾಲದಲ್ಲಿ ನಿಂತ ನೀರು ಹಲವಾರು ಬಗೆಯ ಸೋಂಕುಗಳಿಗೆ ಕಾರಣವಾಗಬಹುದು. ಇಂತಹ ಸಮಯದಲ್ಲಿ ಮಧುಮೇಹಿಗಳು ಇದರ ಬಗ್ಗೆ ಹೆಚ್ಚು ಗಮನವಿಡಬೇಕು.
ಪಾದಗಳನ್ನು ಸ್ವಚ್ಛ ಮತ್ತು ಒಣವಾಗಿರುವಂತೆ ನೋಡಿಕೊಳ್ಳಿ. ಸರಿಯಾದ ಪಾದರಕ್ಷೆಗಳನ್ನು ಧರಿಸಿಕೊಂಡು, ಪಾದಗಳಲ್ಲಿ ಯಾವುದೇ ಗಾಯ, ಬೊಕ್ಕೆ ಅಥವಾ ಸೋಂಕಿನ ಲಕ್ಷಣಗಳು ಇದೆಯಾ ಎಂದು ಪರೀಕ್ಷೆ ಮಾಡಿ. ಯಾವುದೇ ಸಮಸ್ಯೆಗಳು ಇದ್ದರೆ ಆಗ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಿ.
ವ್ಯಾಯಾಮ ಎಚ್ಚರಿಕೆಯಿಂದ:-
ಮಳೆಗಾಲದಲ್ಲಿ ಬೇರೆ ಸಮಯದಂತೆ ಹೊರಗಡೆ ಹೋಗಿ ವ್ಯಾಐಆಮ ಮಾಡುವುದು ಕಷ್ಟವಾಗಬಹುದು. ಆದರೆ ಮನೆಯೊಳಗಡೆ ವ್ಯಾಯಾಮ ಮಾಡುವುದು, ನಡೆಯುವುದು ಇತ್ಯಾದಿ ಮಾಡಬಹುದು.
ಆದರೆ ಜಾರುವಂತಹ ಜಾಗಗಳ ಬಗ್ಗೆ ಎಚ್ಚರ ವಹಿಸಿ. ಯಾಕೆಂದರೆ ಇದರಿಂದ ಬಿದ್ದು ಗಾಯವಾಗುವ ಸಾಧ್ಯತೆಗಳು ಇರಬಹುದು.
ಈ ಎಲ್ಲಾ ಕ್ರಮಗಳನ್ನು ಪಾಲಿಸಿಕೊಂಡು ಹೋದರೆ ಆಗ ಮಳೆಗಾಲದಲ್ಲಿ ಸೂಕ್ತ ರೀತಿಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ನಿಯಮಿತವಾಗಿ ಗ್ಲುಕೋಸ್ ಪರೀಕ್ಷೆ, ಸಮತೋಲಿತ ಆಹಾರ, ಸರಿಯಾಗಿ ಹೈಡ್ರೇಟ್, ಪಾದಗಳ ರಕ್ಷಣೆ ಮತ್ತು ವ್ಯಾಯಾಮದ ವೇಳೆ ಎಚ್ಚರ ಇದೆಲ್ಲವನ್ನು ಸರಿಯಾಗಿ ಪಾಲಿಸಬೇಕು. ಮಳೆಗಾಲ ದಲ್ಲಿ ಆರೋಗ್ಯಕಾರಿ ಜೀವನಶೈಲಿಯನ್ನು ಪಾಲಿಸಿಕೊಂಡು ಹೋದರೆ ಆಗ ಇದು ಮಧುಮೇಹಿಗಳ ಆರೋಗ್ಯ ಕಾಪಾಡ ಬಹುದು
ಮಧುಮೇಹಿಗಳು ವೈದ್ಯರ ಸಲಹೆಗಳನ್ನು ಪಡೆದುಕೊಂಡು, ತಿಂಗಳಿಗೆ ಒಮ್ಮೆಯಾದರೂ ಕೂಡ ಪರೀಕ್ಷೆ ಮಾಡಿಸಿಕೊಳ್ಳ ಬೇಕು. ಅಲ್ಲದೆ ವೈದ್ಯರ ಸಲಹೆ ಮೇರೆಗೆ, ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಮತ್ತು ಜೀವನ ಶೈಲಿಯಲ್ಲಿ ಜೊತೆಗೆ ತೆಗೆದು ಕೊಳ್ಳುವ ಔಷಧಿಯಲ್ಲಿ ಕೂಡ ಬದಲಾವಣೆ ತಂದುಕೊಳ್ಳುವುದು ಅತ್ಯಗತ್ಯ.