ಮಂಡ್ಯ: ಕೇರಳ ಗುಡ್ಡ ಕುಸಿತ ದುರಂತದಲ್ಲಿ ಕನ್ನಡಿಗರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಡ್ಯ ಜಿಲ್ಲೆಯ ಕೆಆರ್ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಕುಟುಂಬವೊಂದು ಸಿಲುಕಿದೆ. ಈ ಕುಟುಂಬದ ಪೈಕಿ ಅಜ್ಜಿ ಮೊಮ್ಮಗ ಸಾವನ್ನಪ್ಪಿದ್ರೆ, ಇನ್ನುಳಿದ ಮೂವರು ಗಾಯಾಳುಗಳಾಗಿ ಪತ್ತೆಯಾಗಿದ್ದಾರೆ.
ಕತ್ತರಘಟ್ಟ ಗ್ರಾಮದ ದೇವರಾಜು, ಲೀಲಾವತಿ, ಅನೀಲ್, ಝಾನ್ಸಿ ಹಾಗೂ ಎರಡುವರೆ ವರ್ಷದ ನಿಹಾಲ್ ಅಲ್ಲಿ ನೆನಸಿದ್ದರು.
ಗುಡ್ಡ ಕುಸಿತವಾದ ವೇಳೆ, ಇವರು ವಾಸವಿದ್ದ ಮನೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಈ ವೇಳೆ 55 ವರ್ಷದ ಲೀಲಾವತಿ ಗುಡ್ಡದ ಮಣ್ಣಿನ ಕೆಳಭಾಗದಲ್ಲಿ ಸೇರಿಕೊಂಡು ಸಾವನ್ನಪ್ಪಿದ್ದಾರೆ. ಇನ್ನೂ ಎರಡುವರೆ ವರ್ಷದ ನಿಹಾಲ್ ಮಣ್ಣು ಹಾಗೂ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಇದಲ್ಲದೇ ದೇವರಾಜು, ಅನೀಲ್, ಝಾನ್ಸಿ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ರು. ಬಳಿಕ ಗಾಯಳುಗಳ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಇದೀಗ ಈ ಮೂವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ