ವಿಜಯಪುರ: ಮಂಗಳಮುಖಿ ಅಂತ ಹೇಳಿ ದುಡ್ಡು ಕೇಳುತ್ತಿದ್ದ ಯುವತಿಯನ್ನು ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಮಂಗಳಮುಖಿ ರೂಪದಲ್ಲಿರೋ ಯುವತಿಯನ್ನು ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಯುವತಿ ಓಡಿಸಿಕೊಂಡು ಬಂದ ಮಂಗಳಮುಖಿಯರು ಲಲಿತ ಮಹಲ್ , ಹಾಗೂ ಮಿಶ್ರ ಪೇಡಾ ಮುಂಭಾಗದಲ್ಲಿ ಪ್ಯಾಂಟ್, ಶರ್ಟ್ ಬಿಚ್ಚಿ ಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಸಾರ್ವಜನಿಕರ ಎದುರಲ್ಲೇ ಏಳೆಂಟು ಮಂಗಳಮುಖಿಯರಿಂದ ಮರ್ಮಾಂಗಕ್ಕೆ ಒದ್ದು, ಕಾರದಪುಡಿ ಹಾಕಿ ಅಮಾನವೀಯವಾಘಿ ಹಲ್ಲೆ ನಡೆಸಿದ್ದಾರೆ. ಯುವತಿ ಅಂಗಲಾಚಿ ಬೇಡಿಕೊಂಡ್ರು ಬಿಡದ ಮಂಗಳಮುಖಿಯರು ಯುವತಿಗೆ ಒದ್ದು ಸೀರೆ ಎತ್ತಿ ತಮ್ಮ ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದಾರೆ. ಇನ್ನೂ ಬೆತ್ತಲೆಗೊಳಿಸಿ ಹಲ್ಲೆ ಮಾಡ್ತಿದ್ದರು ನಿಂತು ನೋಡುತ್ತಿದ್ದ ಜನರು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಕೊಂಡಿದ್ದಾರೆ. ಯುವತಿ ಮಂಗಳಮುಖಿಯರ ಹೆಸರಿನಲ್ಲಿ ದುಡ್ಡು ಕೇಳುತ್ತಿದ್ದ ಎನ್ನಲಾಗಿದೆ.