ಸನ್ನಡತೆ ಆಧಾರದ ಮೇಲೆ ಜೈಲಿನಿಂದ ಹೊರ ಬಂದಿರುವ ಸಿದ್ದಾರೂಡ ಜೈಲಿನಲ್ಲಿ ದರ್ಶನ್ ರನ್ನು ಭೇಟಿಯಾಗಿದ್ದೇನೆ. ಅವರಿಗೆ ಧ್ಯಾನ ಹೇಳಿಕೊಟ್ಟಿದ್ದೇನೆ, ದರ್ಶನ್ ಅವರದ್ದು ವಿಐಪಿ ಸೆಲ್, ಅಲ್ಲಿ ಟಿವಿ ಇದೆ.. ಹೀಗೆ ಸಾಲು ಸಾಲು ಸುಳ್ಳುಗಳನ್ನು ಹೇಳಿದ್ದ ಮಾಜಿ ಖೈದಿ ಸಿದ್ದಾರೂಢನಿಗೆ ಈಗ ಮತ್ತೆ ಜೈಲು ಸೇರುವ ಭಯ ಕಾಡಿದೆ. ಸನ್ನಡತೆ ಆಧಾರದ ಮೇಲೆ ಮೊದಲೇ ರಿಲೀಸ್ ಆಗಿದ್ದ ಸಿದ್ದಾರೂಢ, ಮಾಧ್ಯಮಗಳ ಮುಂದೆ ಸಾಕಷ್ಟು ಬಿಲ್ಡಪ್ ಕೊಟ್ಟಿದ್ದ. ಈಗ ಆತನ ಸನ್ನಡತೆ ಕ್ಯಾನ್ಸಲ್ ಮಾಡಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಕೊಲೆ ಕೇಸ್ನಲ್ಲಿ ಸಿದ್ದಾರೂಢ ಅರೆಸ್ಟ್ ಆಗಿ ಬಳ್ಳಾರಿ ಜೈಲಿನಲ್ಲಿ ಇದ್ದ. ಬಿಡುಗಡೆ ಸಂದರ್ಭದಲ್ಲಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿತ್ತು. ಸನ್ನಡತೆ ಆಧಾರದ ಮೇಲೆ ಮೊದಲೇ ರಿಲೀಸ್ ಆಗಿದ್ದ. ಜೈಲಿನಿಂದ ಹೊರ ಬರುತ್ತಿದ್ದಂತೆ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದ ಈತ ದರ್ಶನ್ ಭೇಟಿಯಾಗಿದ್ದೇನೆ ಎಂದು ಸಖತ್ತಾಗಿಯೇ ಬಿಲ್ಡತ್ ತೆಗೆದುಕೊಂಡಿದ್ದ.
ಸುಳ್ಳು ಸುಳ್ಳು ಹೇಳಿಕೆಯ ಮೂಲಕ ಸಖತ್ತಾಗಿಯೇ ಪಬ್ಲಿಸಿಟಿ ಪಡೆದ ಸಿದ್ದಾರೂಢನಿಗೆ ಕಾನೂನು ಮೂಲಕವೇ ಬಿಸಿ ಮುಟ್ಟಿಸಲು ಕಾರಾಗೃಹ ಇಲಾಖೆ ಮುಂದಾಗಿದೆ. ಈತನಿಗೆ ನೀಡಲಾಗಿದ್ದ ಸನ್ನಡತೆಯನ್ನು ಕ್ಯಾನ್ಸಲ್ ಮಾಡಲು ಜೈಲಾಧಿಕಾರಿಗಳ ತೀರ್ಮಾನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಜೈಲಿನ ಮ್ಯಾನ್ಯುಯಲ್ ಪ್ರಕಾರ ಶಿಸ್ತು ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕಾರಾಗೃಹದ ಬಗ್ಗೆ ಅವಹೇಳನ ಹಾಗೂ ದರ್ಶನ್ ಭೇಟಿಯಾಗದಿದ್ದರೂ ಭೇಟಿಯಾಗಿದ್ದಾಗಿ ಅವರು ಹೇಳಿಕೆ ನೀಡಿದ್ದರು. ಸದ್ಯ ಕಾರಾಗೃಹ ಇಲಾಖೆಯಿಂದ ಗೃಹ ಇಲಾಖೆ ರಿಪೋರ್ಟ್ ಕೇಳಿದೆ.