ಬೆಂಗಳೂರು: ಸಚಿವ ಸಂಪುಟ ಮುನ್ನ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದ ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಂಪುಟ ಸಹೋದ್ಯೋಗಿಗಳಿಗೆ ಉಪಾಹಾರ ಕೂಟ ಏರ್ಪಾಡಿಸಿದ್ದರು.
ಉಪಾಹಾರ ಕೂಟದಲ್ಲಿ ರಾಜ್ಯಪಾಲರ ನಡೆ, ಕಾನೂನು ಹೋರಾಟ, ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಕುರಿತು ಚರ್ಚೆ ನಡೆದಿದ್ದು ಹೇಗೆ ಬಿಜೆಪಯವರ ಪಾದಯಾತ್ರೆಯನ್ನು ಮಟ್ಟ ಹಾಕಬೇಕು ಹಾಗೆ ಅವರ ಹಗರಣಗಳ ಬಗ್ಗೆ ಪಟ್ಟಿ ಮಾಡಬೇಕೆನ್ನುವ ಎಲ್ಲದರ ಬಗ್ಗೆ ಚರ್ಚೆ ನಡೆಸಲಾಗಿದೆ.
ಸಚಿವರ ಜೊತೆ ಬಿಜೆಪಿ ವಿರುದ್ಧ ಮುಂದಿನ ಹೋರಾಟ ನಡೆಸುವ ಕುರಿತು ಸಮಾಲೋಚನೆ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ವ್ಯೂಹವನ್ನ ಬೇಧಿಸುವ ಬಗ್ಗೆ ಚರ್ಚೆ ನಡೆಸಲಿರುವ ಸಿಎಂ ಸಚಿವರನ್ನ ವಿಶ್ವಾಸಕ್ಕೆ ತೆಗದುಕೊಳ್ಳಲು ಕರೆದಿರುವ ಬ್ರೇಕ್ ಫಾಸ್ಟ್ ಮೀಟಿಂಗ್ ಇದಾಗಿತ್ತು
ಸಚಿವರುಗಳು ಎಷ್ಟು ಜನ ಸಿಎಂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತು ಹೋರಾಡ್ತಾರೆ ಅಂತ ನಾವಿನ್ನು ಕಾದು ನೋಡೋಣ!