ಬೆಂಗಳೂರು: ರಾಜ್ಯದಲ್ಲಿ ಎಲ್ಲಾ ಕಡೆಯಲ್ಲೂ ಅಬ್ಬರಿಸುತ್ತಿರುವ ವರುಣ ರಾಜ್ಯದ ಕರಾವಳಿ ಸೇರಿ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಬೆಂಗಳೂರಿನಲ್ಲೂ ಮಳೆ ಬೆಳ್ಳಂ ಬೆಳಗ್ಗೆ ಮಳೆ ಆರಂಭ ಆಗಿದೆ
ಕೆಲಸಕ್ಕೆಂದು ಹೊರಟ ಜನರಿಗೆ ಎದುರಾಯ್ತು ಮಳೆ ಕಾಟ ಮಾರ್ನಿಂಗ್ ಶಿಫ್ಟ್ ಕೆಲಸಕ್ಕೆ ಹೋಗುವ ಜನರಿಗೆ ಎದುರಾದ ಮಳೆರಾಯ ಬೆಳಗ್ಗೆ ಐದು ಗಂಟೆಯಿಂದಲೂ ಸುರಿಯುತ್ತಿರುವ ವರುಣದೇವ ಕೆಲವೆಡೆ ಧಾರಾಕಾರ ಮಳೆ, ಅಲ್ಲಲ್ಲಿ ತುಂತುರು ಹನಿಗಳಾಗಿ ಕಾಟ ಇದೇ ರೀತಿ ಇನ್ನೂ ಮೂರು ದಿನಗಳ ಕಾಲ ಸಾಧ್ಯತೆ
ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಾಗಿ ಸುರಿದ ಮುಂಗಾರು ಮಾರುತ ಜುಲೈನಲ್ಲಿ ವಾಡಿಕೆಗಿಂತ 48% ಹೆಚ್ಚಾಗಿ ಸುರಿದ ಮುಂಗಾರು ಮಳೆ ರಾಜ್ಯದ ಎಲ್ಲಾ ಭಾಗದಲ್ಲೂ ಜುಲೈನಲ್ಲಿ ವಾಡಿಕೆ ಮಳೆಗಿಂತ ಏರಿಕೆ ನಿರೀಕ್ಷೆಯಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಜುಲೈನಲ್ಲಿ ಹೆಚ್ಚಿನ ಮಳೆ ಜುಲೈ 1 ರಿಂದ 30ರ ವರೆಗೆ ರಾಜ್ಯದಲ್ಲಿ 390 mm ಮಳೆ ವಾಸ್ತವದಲ್ಲಿ ಈ ಅವಧಿಯಲ್ಲಿ 263 mm ನಷ್ಟು ಮಳೆಯಾಗುವ ವಾಡಿಕೆ ಆದರೆ ಈ ಬಾರಿ 48% ನಷ್ಟು ಹೆಚ್ಚಾಗಿ ಸುರಿದ ಮುಂಗಾರು ಮಾರುತ
ಪ್ರದೇಶ : ವಾಡಿಕೆ ಮಳೆ : ಸುರಿದ ಮಳೆ : ಶೇ. ವ್ಯತ್ಯಾಸ
ದಕ್ಷಿಣ ಒಳನಾಡು : 77 mm : 97 mm : 27%
ಉತ್ತರ ಒಳನಾಡು : 113 mm : 138 mm : 22%
ಮಲೆನಾಡು : 573 mm : 941 mm : 64%
ಕರಾವಳಿ : 1109 mm : 1710 mm : 54%
ಒಟ್ಟು ರಾಜ್ಯ : 263 mm : 390 mm : 48%