ಗುರುವಾರ ರಾತ್ರಿ ಲೆಬನಾನ್ನಿಂದ ಇಸ್ರೇಲ್ನತ್ತ ಡಜನ್ ಗಟ್ಟಲೆ ರಾಕೆಟ್ ದಾಳಿ ನಡೆಸಲಾಗಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಯ(ಐಡಿಎಫ್) ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
5 ರಾಕೆಟ್ ಮಾತ್ರ ಇಸ್ರೇಲ್ಗೆ ಪ್ರವೇಶಿಸಿದ್ದು, ಯಾವುದೇ ಹಾನಿ ಮತ್ತು ಸಾವುನೋವಿನ ವರದಿಯಾಗಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.
ಲೆಬನಾನ್ನಿಂದ ಇಸ್ರೇಲ್ನ ಪಶ್ಚಿಮದ ಗಲಿಲೀ ಪ್ರದೇಶದ ಮೇಲೆ ರಾಕೆಟ್ ದಾಳಿ ನಡೆಸಲಾಗಿದ್ದು, ಅದರ ಹೊಣೆಯನ್ನು ಇರಾನ್ ಬೆಂಬಲಿತ ಹಿಜ್ಬುಲ್ಲಾ ಹೊತ್ತುಕೊಂಡಿದೆ. ಬೇರೂತ್ನಲ್ಲಿ ಹಮಾಸ್ ನಾಯಕನ ಹತ್ಯೆ ಬಳಿಕ 48 ಗಂಟೆಗಳಲ್ಲಿ ನಡೆದ ಮೊದಲ ದಾಳಿ ಇದಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಲೆಬನಾನ್ನ ಹಳ್ಳಿ ಚಮಾದ ಮೇಲೆ ಇಸ್ರೇಲ್ ದಾಳಿಗೆ ಪ್ರತಿಯಾಗಿ ಡಜನ್ನಷ್ಟು ರಾಕೆಟ್ ದಾಳಿ ನಡೆಸಿದ್ದೇವೆ ಎಂದು ಹಿಜ್ಬುಲ್ಲಾ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.
ಚಮಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 4 ಮಂದಿ ಇರಾನ್ ಪ್ರಜೆಗಳು ಮೃತಪಟ್ಟು, ಲೆಬನಾನ್ ಹಲವು ನಾಗರಿಕರು ಗಾಯಗೊಂಡಿದ್ದರು. ಗುರುವಾರ ರಾತ್ರಿ ಹಲವು ರಾಕೆಟ್ಗಳನ್ನು ನಮ್ಮ ದೇಶದ ಕಡೆಗೆ ಉಡಾಯಿಸಲಾಗಿತ್ತು. ಏರ್ ಡಿಫೆನ್ಸ್ ಮೂಲಕ ಅವುಗಳನ್ನು ತಡೆಯಲಾಗಿದೆ ಎಂದು ಐಡಿಎಫ್ ಮಾಹಿತಿ ನೀಡಿದೆ
‘ಲೆಬನಾನ್ನಿಂದ ಹಲವು ರಾಕೆಟ್ ಉಡಾವಣೆಯಾಗುತ್ತಿದ್ದಂತೆ ಪಶ್ಚಿಮ ಗಲಿಲೀ ಪ್ರದೇಶದಲ್ಲಿ ರಾತ್ರಿ 9.44ರ ಸುಮಾರಿಗೆ ಅಲರ್ಟ್ ಸಕ್ರಿಯಗೊಂಡಿದೆ. ಕೆಲವನ್ನು ರಕ್ಷಣಾ ವ್ಯವಸ್ಥೆಯಿಂದ ತಡೆಯಲಾಗಿದೆ. ಮತ್ತೆ ಕೆಲವು ಖಾಲಿ ಜಾಗದಲ್ಲಿ ಬಿದ್ದಿವೆ. ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಐಡಿಎಫ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ.