ಕೇರಳದ ವಯನಾಡಿನಲ್ಲಿ ಸಂಬವಿಸಿದ ಭೀಕರ ದುರಂತಕ್ಕೆ ಸಾಕಷ್ಟು ಮಂದಿ ಕೊನೆಯುಸಿರೆಳೆದಿದ್ದಾರೆ. ಘಟನೆಯ ಕುರಿತು ದೇಶ, ವಿದೇಶದ ಗಣ್ಯರು ಸಂತಾಪ ಸೂಚಿಸಿದ್ದು ಇದೀಗ ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಸೇನಾ ಸಮವಸ್ತ್ರ ಧರಿಸಿ ದುರಂತ ನಡೆದ ಸ್ಥಳಕ್ಕೆ ಹಾಜರಾಗಿದ್ದಾರೆ. ಸೇನಾ ಶಿಬಿರಕ್ಕೆ ಮೊದಲು ಆಗಮಿಸಿದ್ದ ಮೋಹನ್ ಲಾಲ್ ಆರ್ಮಿ ಮಾಡ್ತಿರೋ ಕೆಲಸವನ್ನು ಶ್ಲ್ಯಾಘಿಸಿದ್ದಾರೆ. ಜೊತೆಗೆ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡಿ ನಡೆಯುತ್ತಿರುವ ಕಾರ್ಯಚರಣೆಯನ್ನು ವೀಕ್ಷಿಸಿದ್ದಾರೆ.
ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರೋ ಮೋಹನ್ ಲಾಲ್, ತನ್ನದೇ ಸೇನೆ ಅಲ್ಲಿ ಕೆಲಸ ಮಾಡುತ್ತಿರುವುದರಿಂದ ಸೇನಾ ಸಮವಸ್ತ್ರದಲ್ಲೇ ಆಗಮಿಸಿದ್ದರು. ಅಲ್ಲಿನ ಸೇನಾ ಮುಖ್ಯಸ್ಥರು ಮತ್ತು ಸೈನಿಕರ ಕೆಲಸವನ್ನು ಮುಕ್ತಕಂಠದಿಂದ ಶ್ಲ್ಯಾಷಿಸಿದ್ದಾರೆ. ಜೊತೆಗೆ ವಯನಾಡಿನ ನೋವಿಗೆ ವೈಯಕ್ತಿಕವಾಗಿ ಸ್ಪಂದಿಸುವ ಕುರಿತು ಅವರು ಮಾತನಾಡಿದ್ದಾರೆ.
ಈಗಾಗಲೇ ಮೂರು ಕೋಟಿಗೂ ಅಧಿಕ ಹಣವನ್ನು ಪರಿಹಾರ ನಿಧಿಗೆ ನೀಡಿರುವ ಮೋಹನ್ ಲಾಲ್, ಇನ್ನೂ ಸಹಾಯ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ. ದುರಂತದಲ್ಲಿ ಮಡಿದ ಕುಟುಂಬಗಳಿಗೆ ಧೈರ್ಯ ಹೇಳುವಂತಹ ಕೆಲಸವನ್ನೂ ಮೋಹನ್ ಲಾಲ್ ಮಾಡಿದ್ದಾರೆ. ಮೋಹನ್ ಲಾಲ್ ಕಾರ್ಯಕ್ಕೆ ಸಾಕಷ್ಟು ಜನರು ಶ್ಲ್ಯಾಘನೆ ವ್ಯಕ್ತ ಪಡಿಸಿದ್ದಾರೆ.
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸತ್ತವರ ಸಂಖ್ಯೆ ಈಗ 300 ದಾಟಿದೆ. ಈ ಭೀಕರ ದುರಂತದಲ್ಲಿ ಮನೆಯನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಹಲವರು ಸಂಕಷ್ಟದಲ್ಲಿದ್ದಾರೆ. ಅವರ ಸಹಾಯಕ್ಕೆ ಸಿನಿಮಾ ನಟ, ನಟಿಯರು ಮುಂದಾಗಿದ್ದಾರೆ.